ಸುದ್ದಿ ಕಣಜ
ಬೆಂಗಳೂರು: ಇನ್ಮುಂದೆ ಕೆ.ಎಸ್.ಆರ್.ಪಿ ಪೊಲೀಸರು ಬೇಕಾಬಿಟ್ಟಿ ಹೊಟ್ಟೆ ಬೆಳೆಸುವಂತಿಲ್ಲ. ಹಾಗೊಮ್ಮೆ ಯದ್ವಾತದ್ವ ಬೊಜ್ಜು ಬೆಳೆಸಿದ್ರೆ, ಅವರ ಮುಂಬಡ್ತಿಗೆ ಬ್ರೇಕ್ ಬೀಳಲಿದೆ!
ಕೆ.ಎಸ್.ಆರ್.ಪಿ ಎಡಿಜಿಪಿ ಅಲೋಕ್ ಕುಮಾರ್ ಇಂತಹದ್ದೊಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಎತ್ತರಕ್ಕೆ ತಕ್ಕಂತೆ ಸರಾಸರಿ ಹತ್ತು ಕೆ.ಜಿ ಅಧಿಕ ತೂಕ ಇರುವವರಿಗೆ ಈ ಫರ್ಮಾನು ಅನ್ವಯವಾಗಲಿದೆ. ಇಂತಹವರಿಗೆ ವಿಶೇಷ ಸೆಷನ್ ನಲ್ಲಿ ವ್ಯಾಯಾಮ ಮಾಡಿಸುವ ಯೋಜನೆ ಕೂಡ ಹೊಂದಲಾಗಿದೆ. ಏಪ್ರಿಲ್ 30ರೊಳಗೆ ತೂಕ ಇಳಿಸಬೇಕೆಂದು ಜ್ಞಾಪನ ಪತ್ರದಲ್ಲಿ ಸೂಚನೆ ನೀಡಲಾಗಿದೆ.
ಎಷ್ಟು ಕೆಜಿ ತೂಕ ಇಳಿಸಬೇಕು ?
- 40 ವರ್ಷದವರು ಸರಾಸರಿ 10 ಕೆಜಿ ತೂಕ ಇಳಿಸಬೇಕು
- 40 ರಿಂದ 50 ವರ್ಷದವರು ಸರಾಸರಿ 5 ಕೆಜಿ ತೂಕ ಇಳಿಸಬೇಕು.
- 50-55 ವರ್ಷದವರು ಸರಾಸರಿ 2.5 ಕೆಜಿ ತೂಕ ಇಳಿಸಬೇಕು
ಕಾರಣವೇನು | ಕೆ.ಎಸ್.ಆರ್.ಪಿ ಪೊಲೀಸರು ವಾಹನದಲ್ಲೇ ಕುಳಿತುಕೊಳ್ಳುವುದರಿಂದ ಹೆಚ್ಚು ಬರುವ ಸಾಧ್ಯತೆ ಇದೆ. ಜತೆಗೆ, ಕಳೆದ ವರ್ಷ ಕೋವಿಡ್ ಕಾಯಿಲೆಗೆ ಏಳು ಜನ ಹಾಗೂ ಇತರೆ ಕಾರಣಗಳಿಂದಾಗಿ 50/ಜನ ಸಾವನ್ನಪ್ಪಿದ್ದರು. ಫಿಟ್ನೆಸ್ ಉದ್ದೇಶದಿಂದ ಆಲೋಕ್ ಕುಮಾರ್ ಬೊಜ್ಜು ಕರಗಿಸುವ ಟಾರ್ಗೆಟ್ ನೀಡಿದ್ದಾರೆ.