ದೇವರ ಮುಕುಟವೇ ಮಾಯ, ಹುಂಡಿ ಹಣವೂ ಬಿಡದ ಖದೀಮರು!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿರುವ ಚೌಡಮ್ಮ ದೇವಸ್ಥಾನದಲ್ಲಿ ದೇವರ ಮುಕುಟ ಮತ್ತು ಹುಂಡಿ ಹಣವನ್ನು ಕಳವು ಮಾಡಿದ ಘಟನೆ ನಡೆದಿದೆ.
ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಲಾಗಿದೆ. ಚೌಡಮ್ಮ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗಿದ್ದ ಹುಂಡಿಯಲ್ಲಿನ ಹಣ ದೋಚಲಾಗಿದೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!