ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಜನವರಿ ಹೊತ್ತಿಗೆ ಮಂಗನ ಕಾಯಿಲೆ ಮಲೆನಾಡಿಗೆ ಕಾಡುತ್ತಿತ್ತು. ಆದರೆ, ಈ ವರ್ಷ ಮಾರ್ಚ್ನಲ್ಲಿ ವರ್ಷದ ಮೊದಲ ಪ್ರಕರಣ ದೃಢಪಟ್ಟಿದೆ.
ಇದನ್ನೂ ಓದಿ | ಇದುವರೆಗೆ ಎರಡು ಮಂಗನ ಕಾಯಿಲೆ ಪತ್ತೆ, ಯಾರಲ್ಲಿ ಸೋಂಕು ದೃಢ?
ತಾಲೂಕಿನ ಕಟ್ಟೆಹಕ್ಲು ಸಮೀಪದ ನೆಲ್ಲಿಕಟ್ಟೆ ಗ್ರಾಮದ 55 ವರ್ಷ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಕೂಲಿ ಕೆಲಸ ಮಾಡುವ ಮಹಿಳೆಯಲ್ಲಿ ಫೆಬ್ರವರಿ 22ರಂದು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ.ಎಫ್.ಡಿ ಲಕ್ಷಣಗಳಿದ್ದುದ್ದರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ವೈರಾಣು ಇರುವುದು ದೃಢಪಟ್ಟಿದೆ.
ಶ್ರೀದೇವಿ ಲಸಿಕೆ ಪಡೆದಿರಲಿಲ್ಲ | ಕಟ್ಟೆಹಕ್ಲು ವ್ಯಾಪ್ತಿಯಲ್ಲಿ ಕೆಎಫ್.ಡಿ ಲಸಿಕೆಯನ್ನು ಬಹುತೇಕ ಎಲ್ಲರಿಗೂ ನೀಡಲಾಗಿದೆ. ಈಗ ಸೋಂಕು ಪತ್ತೆಯಾಗಿರುವ ಮಹಿಳೆಯ ಕುಟುಂಬದವರಿಗೂ ಲಸಿಕೆ ನೀಡಲಾಗಿದೆ. ಆದರೆ, ಮಹಿಳೆಯು ಚುಚ್ಚು ಮದ್ದು ಪಡೆದಿಲ್ಲ.
10 ಮಂಗಗಳ ಸಾವು | ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 10 ಮಂಗಗಳು ಮೃತಪಟ್ಟಿರುವುದು ದೃಢಪಟ್ಟಿದೆ. ಆದರೆ, ಯಾವುದರಲ್ಲೂ ಕೆ.ಎಫ್.ಡಿ. ವೈರಾಣು ಇಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.