ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಬಿ.ಆರ್.ಪಿ. ಸಮೀಪದ ಲಕ್ಕಿನಕೊಪ್ಪದಲ್ಲಿ 36 ವರ್ಷದ ಪುರುಷರೊಬ್ಬರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಈ ವರ್ಷದ ಮೊದಲ ಮಂಗನ ಕಾಯಿಲೆ ಪತ್ತೆ, ಕುಟುಂಬದವರು ಪಡೆದರೂ ಈಕೆ ಪಡೆದಿಲ್ಲ ಲಸಿಕೆ
ಸುಸ್ತು, ಜ್ವರ ಇದ್ದುದ್ದರಿಂದ ಅವರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮಂಗಳವಾರ ರಾತ್ರಿ ಸೋಂಕು ಇರುವುದು ದೃಢಪಟ್ಟಿದೆ. ಕೃಷಿಕರಾದ ಅವರಿಗೆ ವೈರಾಣು ಹೇಗೆ ತಗಲಿದೆ ಎಂಬುವುದು ಇನ್ನೂ ತಿಳಿದುಬಂದಿಲ್ಲ. ಆರೋಗ್ಯವಾಗಿಯೇ ಇದ್ದಾರೆ.