ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯಲ್ಲಿರುವ ಯುನಿಲೆಟ್ ಸ್ಟೋರ್ಸ್ ನಲ್ಲಿ ಮಾರ್ಚ್ 5ರಿಂದ 11 ದಿನಗಳು ವಿಶೇಷ ಆಫರ್ ನೀಡಲಾಗಿದೆ.
ಯುನಿಲೆಟ್ 17ನೇ ವಾರ್ಷಿಕ ಉತ್ಸವದ ಅಂಗವಾಗಿ ಯುನಿಲೆಟ್ ಸ್ಟೋರ್ ನಲ್ಲಿ ಆಫರ್ ಲಭ್ಯವಿದ್ದು, ಪ್ರತಿ 10 ಸಾವಿರ ರೂಪಾಯಿ ಖರೀದಿಯ ಮೇಲೆ ಒಂದು ಸ್ಕ್ರ್ಯಾಚ್ ಎ ಕಾರ್ಡ್ ಆಂಡ್ ವಿನ್ ಸೌಲಭ್ಯವಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಯುನಿಲೆಟ್ ಬಿಸಿನೆಸ್ ಹೆಡ್ ಕೆ.ಟಿ.ಮುರುಳೀಧರ್ ತಿಳಿಸಿದರು.
ಇದನ್ನೂ ಓದಿ | ಮಾರ್ಚ್ 7ರಂದು ನಡೆಯಲಿದೆ ಬೈಕ್ ಹರಾಜು
ಏನೇನು ಲಭ್ಯ | ಎಲ್.ಇ.ಡಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಮಿಕ್ಸರ್ ಗ್ರ್ಯಾಂಡರ್, ಕುಕ್ ಟಾಪ್ಸ್, ಏರ್ ಕೂಲರ್ಸ್, ಫ್ಯಾನ್ಸ್ ಮತ್ತಿತರ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದೆ ಎಂದು ಹೇಳಿದರು.
ಗ್ರಾಹಕರಿಗೆ ಖರೀದಿಯ ಮೇಲೆ ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ. ಕಾಂಬೋ ಡೀಲ್ಸ್, ಎಕ್ಸ್ ಚೇಂಜ್, ಇಎಂಐ ಮೇಲೆಯೂ ಸಾಮಗ್ರಿ ಖರೀದಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಸ್ಟೋರ್ ಮ್ಯಾನೇಜರ್ ಚೆಲುವ ಕುಮಾರ್, ಅಜಯ್ ಕುಮಾರ್ ಉಪಸ್ಥಿತರಿದ್ದರು.