ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇತ್ತೀಚೆಗೆ ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ `ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ’ ಪಟ್ಟಿಯಲ್ಲಿ ಶಿವಮೊಗ್ಗ ನಗರಕ್ಕೆ 26ನೇ ಸ್ಥಾನ ಲಭಿಸಿದೆ.
10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಮಹಾನಗರಗಳಲ್ಲಿ ವಿವಿಧ ಮಾನದಂಡಗಳನ್ನು ಆಧರಿಸಿ 62 ಮಹಾ ನಗರಗಳಲ್ಲಿ 26ನೇ ಸ್ಥಾನ ಪಡೆದುಕೊಂಡಿದೆ.
ಯಾವುದಕ್ಕೆ ಎಷ್ಟು ಅಂಕ | ಪುರಸಭೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಸೇವೆ, ಆರ್ಥಿಕ, ತಂತ್ರಜ್ಞಾನ, ಯೋಜನೆ ಹಾಗೂ ಆಡಳಿತ ಮಾನದಂಡಗಳಿದ್ದು, ಇದರಲ್ಲಿ 34ನೇ ಸ್ಥಾನ ಗಳಿಸಿದೆ.
ಸುಲಲಿತ ಜೀವನ ಸೂಚ್ಯಂಕ ವಿಭಾಗದಲ್ಲಿ ಶಿವಮೊಗ್ಗ ನಗರವು ಆರ್ಥಿಕ ಸಾಮಥ್ರ್ಯದಲ್ಲಿ 3.20 ಅಂಕ, ಸುಲಲಿತ ಜೀವನದಲ್ಲಿ 52.86, ಗುಣಮಟ್ಟದ ಜೀವನದಲ್ಲಿ 50.69, ಸುಸ್ಥಿರತೆಯಲ್ಲಿ 50.16 ಹಾಗೂ ನಾಗರಿಕ ಗ್ರಹಿಕೆಯಲ್ಲಿ 82.00 ಅಂಕ ಪಡೆದಿದೆ.