ಸುದ್ದಿ ಕಣಜ.ಕಾಂ
ಶಿಕಾರಿಪುರ: ವೇಗಕ್ಕೆ ಹೆಸರಾಗಿದ್ದ `ಈಸೂರು ದಂಗೆ’ ಇನ್ನಿಲ್ಲ. ಈ ಸುದ್ದಿ ಕೇಳಿದ್ದೇ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದರು. ಶಿವಮೊಗ್ಗ ಮಾತ್ರವಲ್ಲದೇ ಹಾವೇರಿಯಲ್ಲೂ ಈ ಹೋರಿ ಫೇಮಸ್ ಆಗಿತ್ತು. ಇದ್ದಷ್ಟು ದಿನ ತನ್ನ ಪ್ರಭಾವಕ್ಕೆ ಕುತ್ತು ಬಾರದಂತೆ ಬದುಕಿದ್ದ ಈಸೂರು ದಂಗೆ ಗುರುವಾರ ವಯೋಸಹಜ ಸಾವು ಕಂಡಿದೆ.
ಇದನ್ನೂ ಓದಿ | ಕನ್ನಡದ ಮೊದಲ ಶಾಸನ ತಾಳಗುಂದಕ್ಕೆ ಸಿಗಬೇಕಿದೆ ಮಾನ್ಯತೆ
ಇದರ ವೇಗ, ಚಾಕಚಕ್ಯತೆಗೆ ಅಭಿಮಾನಿಗಳು ಫಿದಾ ಆಗಿ ಕೈ ಮೇಲೆ ಈ ಹೋರಿ ಹೆಸರಿನ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು. ಹೋರಿಗೆ ಕಟ್ಟಿದ ಕೊಬ್ಬರಿ, ಪೀಪಿ ಹರಿಯುವುದಕ್ಕೆ ಎಂತಹ ಜಟ್ಟಿಗೂ ಸಾಧ್ಯವಾಗಲಿಲ್ಲ. ಹೀಗಾಗಿ, ಶಿಕಾರಿಪುರದಲ್ಲಿ ಈಸೂರು ಎಂದರೆ ಎಷ್ಟು ಗೌರವವೋ `ಈಸೂರು ದಂಗೆ’ ಎಂದರೆ ಅಷ್ಟೇ ಅಭಿಮಾನವಿದೆ.
ದಾಖಲೆಗಳ ಸುರಿಮಳೆ | ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಈಸೂರು ದಂಗೆ ಹಲವು ಸಾಧನೆಗಳನ್ನು ಮಾಡಿದೆ. 5 ಬೈಕ್, 50 ಗ್ರಾಂ ಚಿನ್ನ, 7 ಫ್ರಿಡ್ಜ್, 8 ಟಿವಿ, 25 ಅಲ್ಮೆರಾ ಹೀಗೆ ಬರೆಯುತ್ತ ಹೋದರೆ ಇದರ ಸಾಧನೆಯ ಪಟ್ಟಿ ದೊಡ್ಡದಾಗುತ್ತದೆ.
ಭಾವಪೂರ್ಣ ವಿದಾಯ | ಮೃತಪಟ್ಟ ಹೋರಿಗೆ ಅಶೋಕ ಚಕ್ರರಹಿತ ತ್ರಿವರ್ಣ ಧ್ವಜ ಹೊದಿಸಿ ಅಂತ್ಯಸಂಸ್ಕಾರ ಮಾಡಲಾಯಿತು. 2 ಸಾವಿರಕ್ಕೂ ಅಧಿಕ ಅಭಿಮಾನಿಗಳು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. ರಾಷ್ಟ್ರ ಗೀತೆ ಮೊಳಗುವ ಮೂಲಕ ಗೌರವ ಸೂಚಿಸಲಾಯಿತು.