ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಾಲಿ ಡೇ ಆಫರ್ ಗಾಗಿ ಚಳಿಗಾಲ, ಮಳೆಗಾಲ ಅಥವಾ ಬೇಸಿಗೆ ಕಾಲ.. ಎಂದೆಲ್ಲ ಕಾಯುವ ಅಗತ್ಯವೇ ಇಲ್ಲ. ಕಾರಣ, ಶಿವಮೊಗ್ಗದಲ್ಲಿ 365 ದಿನ ಹಾಲಿ ಡೇ ಆಫರ್ ಸಿಗಲಿದೆ.

ಗಿಗಾ ಟ್ರಾವೆಲ್ ಕೇಶನ್ಸ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಈ ಆಕರ್ಷಕ ಆಫರ್ ನೀಡಲಾಗುತ್ತಿದೆ. ನಗರದ ಸಿಟಿ ಸೆಂಟರ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ಬೃಹತ್ ತೆರೆಯಲ್ಲಿ ಗಿಗಾ ಕಂಪೆನಿ ಲೋಕಾರ್ಪಣೆಗೊಳ್ಳಲಿದೆ. ಮಾರ್ಚ್ 11ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕಂಪೆನಿ ಉದ್ಘಾಟನೆಗೊಳ್ಳಲಿದೆ.
ಏನೇನು ಸೌಲಭ್ಯ ಲಭ್ಯ
ಜೀವನ ಬಹುಮುಖ್ಯ ಕ್ಷಣಗಳನ್ನು ಅವಿಸ್ಮರಣೀಯ ಮಾಡುವಲ್ಲಿ ಗಿಗಾ ಕಂಪೆನಿಯೂ ಸಹಕಾರಿಯಾಗಲಿದೆ. ಮಾಲ್ಡೀವ್ಸ್ , ಡೆಲ್ಲಿ , ಶಿಮ್ಲಾ ಮನಾಲಿ , ಊಟಿ ,ಕೊಡೈಕೆನಾಲ್ ,ದಾಂಡೇಲಿ, ಸಕಲೇಶಪುರ ಹೀಗೆ ಮುಂತಾದ ಸೌತ್ ಇಂಡಿಯಾ ಹಾಗೂ ನಾರ್ತ್ ಇಂಡಿಯಾ ಪ್ಯಾಕೇಜ್ ಸರ್ವಿಸ್ ಲಭ್ಯವಿದೆ. ಜತೆಗೆ, ಗೋವಾ, ಅಂಡಮಾನ್, ಜೈಪುರ ಸೇರಿದಂತೆ ವಿವಿಧೆಡೆ ಪ್ರಯಾಣಿಸುವ ಅವಕಾಶವಿದೆ.
ಹಾಲಿ ಡೇ ಟ್ರಿಪ್ ನಲ್ಲಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೊಶೂಟ್, ಬರ್ತ್ ಡೇ ಪಾರ್ಟೀಸ್, ಎಲ್ಲ ಬಗೆಯ ಸ್ಟೇಜ್ ಮತ್ತು ಮನೆ ಡೆಕೋರೇಷನ್, ಕ್ಯಾಟರಿಂಗ್, ಡಿಜೆ ಸೌಂಡ್, ಲೈಟಿಂಗ್ಸ್ ಜತೆ ಸಿಸ್ಟ್ಂ, ಫೋಟೊಗ್ರಾಫಿ ಹಾಗೂ ವಿಡಿಯೋಗ್ರಾಫಿ ಮಾಡಲಾಗುವುದು.
ಕ್ಲಬ್ ಮೆಂಬರ್ ಆದ್ದಲ್ಲಿ ಶೇ.5 ರಿಂದ 10ರಷ್ಟು ರಿಯಾಯಿತಿ ನೀಡಲಾಗುವುದು. ಜತೆಗೆ, ಪ್ರಯಾಣದ ವೇಳೆ ಟ್ರಾವೆಲ್ ಬ್ಯಾಗ್, ಫ್ರಿ ಟ್ರಾವೆಲ್ ಇನ್ಶೂರೆನ್ಸ್ ನೀಡಲಾಗುವುದು.

ಸೆಲ್ಫಿ ಕ್ಲಿಕ್ಕಿಸಿ ಕಳುಹಿಸಿ
ಭಾರತ ಸಿನೇಮಾಸ್ ನಲ್ಲಿ ಎಲ್.ಇ.ಡಿ ಸ್ಕ್ರೀನ್ ಅಳವಡಿಸಿದ್ದು, ಎಲ್ಲ ದೇಶಗಳ ಚಿತ್ರಗಳನ್ನು ಅಲ್ಲಿ ಅಳವಡಿಸಲಾಗಿದೆ. ದೇಶ, ವಿದೇಶ ಪ್ರಯಾಣಿಸಲು ಇಚ್ಛಿಸುವವರು ಆ ದೇಶದ ಚಿತ್ರದ ಎದುರು ನಿಂತು ಫೋಟೊ ಕ್ಲಿಕ್ಕಿಸಿ ಕಳುಹಿಸಿದರೆ ಸಾಕು ಅವರಿಗೆ ಆಕರ್ಷಕ ರಿಯಾಯಿತಿ ಮತ್ತು ಆಫರ್ ನೀಡಲಾಗುವುದು. ಇದು ಮಾರ್ಚ್ 11ರಂದು ಮಧ್ಯಾಹ್ನ 12.30 ನಂತರ ಆರಂಭವಾಗಲಿದೆ.
ಟ್ರಾವೆಲ್ ಅಷ್ಟೇ ಅಲ್ಲ, ಸೂಪರ್ ಮಾರ್ಕೆಟ್ ಇದೆ
ಚಿಕ್ಕಮಗಳೂರಿನ ಕೊಪ್ಪ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮತ್ತು ಹೊಸನಗರದಲ್ಲಿ ಸೂಪರ್ ಮಾರ್ಕೆಟ್ ಗಳನ್ನೂ ತೆರೆಯಲಾಗುತ್ತಿದೆ. ಅಲ್ಲಿ ಮೆಂಬರ್ ಆದರೆ ಸಾಮಗ್ರಿ ಖರೀದಿಯ ಮೇಲೆ ರಿಯಾಯಿತಿ ದೊರಕಲಿದೆ. ಮತ್ತ್ಯಾಕೆ ತಡ ಬನ್ನಿ ಭೇಟಿ ನೀಡಿ, ಲಾಭ ಪಡೆಯಿರಿ…
ಹೆಚ್ಚಿನ ಮಾಹಿತಿಗಾಗಿ, ಗಿರೀಶ್ 8971159905 ಗೆ ಸಂಪರ್ಕಿಸಿ.

 

ಇದೇ ಮೊದಲು ಮಹಿಳಾ ನಾಟಕೋತ್ಸವ, ಎಲ್ಲಿ ಗೊತ್ತಾ? ಯಾವ ದಿನ ಯಾವ ನಾಟಕ ಇಲ್ಲಿದೆ ಮಾಹಿತಿ