ಸುದ್ದಿ ಕಣಜ.ಕಾಂ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ರಾಜ್ಯ ಬಜೆಟ್ ಮಂಡಿಸಿದ್ದು, ಮಹಿಳಾ ದಿನಾಚರಣೆಗೆ ಹಲವು ಗುಡ್ ನ್ಯೂಸ್ ಗಳನ್ನು ನೀಡಿದ್ದಾರೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಅದರಲ್ಲೂ ಸರ್ಕಾರಿ ಮಹಿಳಾ ನೌಕರರಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆ ಮಂಜೂರು ಮಾಡಿದ್ದಾರೆ. ಇದು ಮಹಿಳಾ ನೌಕರರಿಗೆ ವರದಾನವಾಗಿ ಮಾರ್ಪಡಲಿದೆ.
ಮಹಿಳೆಯರಿಗೆ ಇನ್ನುಳಿದ ಗಿಫ್ಟ್
- ಸೇಫ್ ಸಿಟಿ ಯೋಜನೆ ಅಡಿ ಬೆಂಗಳೂರು ನಗರದ ಸಾರ್ವಜನಿಕ ಸ್ಥಳಗಳಲ್ಲಿ 7,500 ಕ್ಯಾಮೆರಾ ಅಳವಡಿಕೆ, ತಂತ್ರಜ್ಞಾನ ಆಧಾರಿತ ಇ-ಬೀಟ್ ಮೂಲಕ ರಾತ್ರಿ ಗಸ್ತು
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದ ಮಹಿಳೆಯರಿಗೆ ಪ್ರಾಂಗಣದಲ್ಲಿನ ನಿವೇಶನ, ಗೋದಾಮು, ಅಂಗಡಿ ಹಂಚಿಕೆಯಲ್ಲಿ ಶೇ.10ರಷ್ಟು ಮೀಸಲಾತಿ
- ಮಹಿಳಾ ವಾಣಿಜ್ಯೋದ್ಯಮಿಗಳನ್ನು ಬೆಂಬಲಿಸಲು, ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಎಲೆವೆಟ್ ನವೋದ್ಯಮ ಕಾರ್ಯಕ್ರಮ ಜಾರಿ
- ರಾಜ್ಯ ಸ್ವ ಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟವನ್ನು ಬಲಪಡಿಸಲು ಸ್ವಸಹಾಯ ಗುಂಪುಗಳ ನೀತಿ ಜಾರಿ ಎಲ್ಲ ಸ್ವ ಸಹಾಯ ಗುಂಪುಗಳನ್ನು ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ತರಲು ಕ್ರಮ
- ಮುಖ್ಯಮಂತ್ರಿಗಳ ನೇರ ಮೇಳ್ವಿಚಾರಣೆಯಲ್ಲಿ ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣ ಅಭಿಯಾನಕ್ಕೆ ಚಾಲನೆ ಹೀಗೆ ವಿವಿಧ ಮಹಿಳಾ ಪರವಾದ ಯೋಜನಗೆಳನ್ನು 2021-22 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದೆ.