ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಕೀ ಪೋಸ್ಟ್ ಗಳಲ್ಲಿ ಮಹಿಳೆಯರದ್ದೇ ಹವಾ ಇದೆ. ಪ್ರಥಮ ಪ್ರಜೆಯಾದ ಪಾಲಿಕೆ ಮೇಯರ್ ಒಳಗೊಂಡಂತೆ ಮುಖ್ಯ ಹುದ್ದೆಗಳಲ್ಲಿ ಪ್ರಮಿಳೆಯರೇ ವಿರಾಜಮಾನರಾಗಿದ್ದಾರೆ.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಶಿಕ್ಷಣ ಕೊಡಿಸುವುದಕ್ಕೆ ಈಗಲೂ ಮೀನ ಮೇಷ ಎಣಿಸುವ ಜನರಿದ್ದಾರೆ. ಆದರೆ, ಮಹಿಳೆ ಶಿಕ್ಷಣ, ರಾಜಕೀಯ, ಆಡಳಿತ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮ ಪ್ರಾಬಲ್ಯ ತೋರುತ್ತಲೇ ಬರುತ್ತಿದ್ದಾರೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಯಾವ ಹುದ್ದೆಯಲ್ಲಿ ಯಾರು?
ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯಲ್ಲಿ ಸುವರ್ಣ ಶಂಕರ್ ಹಾಗೂ ಉಪ ಮೇಯರ್ ಆಗಿ ಸುರೇಖಾ ಮುರುಳೀಧರ್ ಇದ್ದಾರೆ.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ
ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ
ಜಿಪಂ ಮುಖ್ಯ ಯೋಜನಾಧಿಕಾರಿ ಉಮಾ ಡಿ.ಸದಾಶಿವ
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್
ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್.ಸರಸ್ವತಿ
ಹೀಗೆ, ವಿವಿಧ ಹುದ್ದೆಗಳಲ್ಲಿ ಮಹಿಳೆಯರು ಅಧಿಕಾರದಲ್ಲಿದ್ದಾರೆ. ಇನ್ನು ಪಟ್ಟಣ ಪಂಚಾಯಿತಿ, ಪಿರ ಸಭೆ, ನಗರ ಸಭೆ, ಗ್ರಾಮ ಪಂಚಾಯಿತಿಗಳಲ್ಲೂ ಪ್ರಮಿಳೆಯರು ಅಧಿಕಾರದಲ್ಲಿದ್ದಾರೆ.