ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಂತ್ರಿಕ ಕಾರಣಗಳಿಂದಾಗಿ ಗಾಜನೂರು ಮೂಲ ಸ್ಥಾವರದಲ್ಲಿ ವಿದ್ಯುತ್ ಪೂರೈಕೆ ನಿಲುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಮಾರ್ಚ್ 16 ಮತ್ತು 17ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆ.ಯು.ಡಬ್ಲು.ಎಸ್.ಎಸ್.ಬಿ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.