ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಗರದ ಗಾಂಧಿ ಮೈದಾನದಲ್ಲಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನವನ್ನು ಮಲೆನಾಡು ಪೆಟ್ಸ್ ಲವರ್ಸ್ ಸಾಗರ ವತಿಯಿಂದ ಏಪ್ರಿಲ್ 4ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಿರಣ್ ಕುಮಾರ್ ತಿಳಿಸಿದರು.
ಇದನ್ನೂ ಓದಿ | ಕೆಜಿಎಫ್ ಚಾಪ್ಟರ್ 2, ಯುವರತ್ನ ಉಚಿತವಾಗಿ ನೋಡುವ ಸುವರ್ಣಾವಕಾಶ
ರಾಜ್ಯಮಟ್ಟದ ಪ್ರದರ್ಶನ ಇದಾಗಿದ್ದು, 50 ಸಾವಿರಕ್ಕೂ ಅಧಿಕ ನಗದು ಬಹುಮಾನವನ್ನು ವಿಜೇತ ಬೆಕ್ಕು ಮತ್ತು ಶ್ವಾನಗಳಿಗೆ ನಿಗದಿಪಡಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಹೇಳಿದರು.
ಯಾವುದಕ್ಕೆಷ್ಟು ಬಹುಮಾನ | ಶ್ವಾನ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ 15 ಸಾವಿರ ಬಹುಮಾನ, ದ್ವಿತೀಯಕ್ಕೆ 10 ಸಾವಿರ, ತೃತೀಯಕ್ಕೆ 7 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಅದೇ ರೀತಿ ಬೆಕ್ಕುಗಳ ವಿಭಾಗದಲ್ಲಿ ಬೆಸ್ಟ್ ಪಪ್ಪಿಗೆ 3 ಸಾವಿರ, ಬೆಸ್ಟ್ ಇಂಡಿಯನ್ ಬ್ರೀಡಿಗೆ 2 ಸಾವಿರ, ಬೆಸ್ಟ್ ಹ್ಯಾಂಡಲರ್ 1 ಸಾವಿರ, ಜ್ಯೂನಿಯರ್ ಹ್ಯಾಂಡಲರ್ 1 ಸಾವಿರ ನೀಡಲಾಗುವುದು.
ಪ್ರದರ್ಶನದಲ್ಲಿ ಭಾಗವಹಿಸಲು ಬಯಸಿದ್ದಲ್ಲಿ ಅದಕ್ಕೆ ಪ್ರವೇಶ ಶುಲ್ಕ 250 ರೂಪಾಯಿ ನಿಗದಿಪಡಿಸಲಾಗಿದೆ. ಸ್ಥಳದಲ್ಲೇ ಶುಲ್ಕ ಪಾವತಿಸಿದ್ದಲ್ಲಿ 350 ರೂ. ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಮೊಬೈಲ್ 9880178104ಗೆ ಕರೆ ಮಾಡುವಂತೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘಟನೆಯ ವಿನಯ್ ರಾಜಾವತ್, ಕಿರಣ್ ಕುಮಾರ್, ಮಂಜು, ಗಣೇಶ್, ರಾಹುಲ್ ಉಪಸ್ಥಿತರಿದ್ದರು.