ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾನುವಾರ ಸಂಜೆ ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆಯಾಗಿದ್ದು, ಹೊಲದಲ್ಲಿ ಕಣಕ್ಕೆ ಹಾಕಿದ್ದ ಶುಂಠಿಯ ಮೇಲೆ ಟಾರ್ಪಲ್ ಮುಚ್ಚಲು ಹೋಗಿದ್ದ ಯುವಕನೊಬ್ಬ ಸಿಡಿಲು ಬಡಿದು ಮೃತಪಟ್ಟ ಘಟನೆ ಆಯನೂರಿನಲ್ಲಿ ನಡೆದಿದೆ.
ಅಣ್ಣಾನಗರ ನಿವಾಸಿ ಆದಿಲ್ (18) ಮೃತ ಯುವಕ. ಆದಿಲ್ ಅವರ ಮಾವ ಶಾಕೀರ್ ಹೊಲದಲ್ಲಿ ಶುಂಠಿ ಕಣಕ್ಕೆ ಹಾಕಲಾಗಿತ್ತು. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.