ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು 2021-22ನೇ ಸಾಲಿನ ಬಜೆಟ್ ಮಂಡಿಸಿದರು.
ಇದನ್ನೂ ಓದಿ | ಮಾಸ್ಕ್ ಧರಿಸದವರಿಗೆ ದಂಡ, ಒಂದೇ ತಿಂಗಳಲ್ಲಿ 2.23 ಲಕ್ಷ ರೂ. ಫೈನ್, ಯಾವ ತಾಲೂಕಿನಲ್ಲಿ ಎಷ್ಟು ದಂಡ?
ನಂತರ, ಆಡಳಿತ ಪಕ್ಷದ ಎಲ್ಲ ಸದಸ್ಯರು ಸಭಾಂಗಣದಿಂದ ಹೊರನಡೆದರು. ಬೆನ್ನಲ್ಲೇ ವಿರೋಧ ಪಕ್ಷದವರು ಸಭಾಂಗಣದ ದ್ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಬಜೆಟ್ ಸಭೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ವೇದಿಕೆಯಲ್ಲಿದ್ದರು.
288.49 ಕೋಟಿ ರೂ. ಬಜೆಟ್ ಗಾತ್ರ | 2020-21ರಲ್ಲಿ ಕೋವಿಡ್ ನಿಂದಾಗಿ ಪಾಲಿಕೆಗೆ ಹೆಚ್ಚುವರಿ ಖರ್ಚು ಸಹ ಆಗಿದೆ. ಆದರೂ ಈ ವರ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಈ ಸಲದ ಬಜೆಟ್ ಗಾತ್ರ 288.49 ಕೋಟಿ ರೂಪಾಯಿ ಇದೆ. ಆರಂಭಿಕ ಶುಲ್ಕ 113.52 ಕೋಟಿ ರೂಪಾಯಿ ಇದ್ದು, ಒಟ್ಟು ಖರ್ಚು 285.67 ಕೋಟಿ ರೂಪಾಯಿ ಇದೆ. ಹೀಗಾಗಿ, ಇದು 2.81 ಕೋಟಿ ರೂ. ಉಳಿತಾಯವಾಗಲಿದೆ.
`ಹುಣಸೋಡು ಘಟನೆ ಮಾಸುವ ಮುನ್ನವೇ ಅಕ್ರಮ ಕಲ್ಲು ಕ್ವಾರಿಗಳಿಗೆ ಮತ್ತೆ ಜೀವ’