ಚಿನ್ನದ ಆಸೆ ತೋರಿಸಿ ದರೋಡೆ ಮಾಡಿದವರು ಅರೆಸ್ಟ್, ಆರೋಪಿಗಳು ಮಾಡಿದ ಪ್ಲಾನ್ ಕೇಳಿದರೆ ಶಾಕ್ ಆಗ್ತೀರಾ!

 

 

ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ತನ್ನ ಬಳಿ ಚಿನ್ನವಿದ್ದು, ಹಣ ನೀಡಿದರೆ ಅದನ್ನು ಕೊಡುವುದಾಗಿ ಹೇಳಿ ದೇವಿಕೊಪ್ಪ ಅರಣ್ಯ ಪ್ರದೇಶದ ಬಳಿ ಕರೆಸಿ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಗಳಿಕೊಪ್ಪ ಗ್ರಾಮದ ನಿವಾಸಿ ಕುಂಟ ಕುಮಾರ್(32), ದಾವಣಗೆರೆಯ ಸಂತೋಷ್(30), ವಸಂತ್ ಕುಮಾರ್(26) ಬಂಧಿತರು. ಇವರನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಮಾಡಿದ ಪ್ಲಾನ್ ಏನು | ಮಂಡ್ಯ ಜಿಲ್ಲೆಯ ನಾಗಮಂಗಲದ ಕೃಷ್ಣಮೂರ್ತಿ ಎಂಬುವವರನ್ನು ದರೋಡೆ ಮಾಡಲಾಗಿತ್ತು. ಕುಂಟು ಕುಮಾರ್ ಎಂಬಾತನಿಗೆ ಹೇಗೋ ಕೃಷ್ಣಮೂರ್ತಿ ಪರಿಚಯವಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡ ಕಿಂಗ್ ಪಿನ್ ಕುಂಟು ಕುಮಾರ್ ಆತನಿಗೆ ದೇವಿಕೊಪ್ಪ ಕಾಡಿಗೆ ಬರುವಂತೆ ತಿಳಿಸಿದ್ದಾನೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಇದನ್ನು ನಂಬಿ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹಣದೊಂದಿಗೆ ಕಾಡಿಗೆ ಬಂದಿದ್ದಾನೆ. ಅಲ್ಲಿಯೇ ಕಾದು ಕುಳಿತಿದ್ದ ಆರೋಪಿ ಮತ್ತು ಸಹಚರರು ಕೃಷ್ಣಮೂರ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 1.50 ಲಕ್ಷ ನಗದು, ಮೊಬೈಲ್, ಕೊರಳಿನಲ್ಲಿದ್ದ ನಕಲಿ ಚಿನ್ನದ ಸತ ಕಿತ್ತು ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಿರಾಳಕೊಪ್ಪ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡ | ಡಿವೈಎಸ್.ಪಿ ಶಿವಾನಂದ್ ಮದರಕಂಡಿ ಮಾರ್ಗದರ್ಶನದಲ್ಲಿ ಸಿಪಿಐ ಗುರುರಾಜ್ ಎನ್.ಮೈಲಾರಿ, ಪಿಎಸ್.ಐ ರಮೇಶ್, ಸಿಬ್ಬಂದಿ ಎಚ್.ಸಿ.ಕೊಟ್ರೇಶಪ್ಪ, ಮಂಜುನಾಥ್, ಅಶೋಕ್, ಪ್ರಭುಗೌಡ ಮತ್ತಿತರರ ತಂಡ ಕಾರ್ಯಾಚರಣೆ ನಡೆಸಿದೆ.

error: Content is protected !!