BHADRAVATHI | ನಾವೂ ರಾಮ ಭಕ್ತರೆ, ಹಿಂದೂಗಳೆ, ಪೊಲೀಸರು ಹೆದರಿ ಕೇಸ್ ಮಾಡಿದ್ದಾರೆ: ಬಿ.ಕೆ.ಸಂಗಮೇಶ್ವರ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ‘ನಾವೂ ರಾಮ ಭಕ್ತರು, ಹಿಂದೂಗಳೇ ಆಗಿದ್ದೇವೆ. ಸತ್ಯವನ್ನು ಕಣ್ಣಾರೆ ಕಂಡರೂ ಪೊಲೀಸರು ಬಿಜೆಪಿಗೆ ಹೆದರಿ ಐಪಿಸಿ ಸೆಕ್ಷನ್ 307 ಮತ್ತಿತರ ಪ್ರಕರಣಗಳನ್ನು ದಾಖಲಿಸಿದ್ದಾರೆ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಆರೋಪಿಸಿದ್ದಾರೆ.

ಶ್ರೀರಾಮನ ಹೆಸರಿನಲ್ಲಿ ಗಲಭೆ, ಅಶಾಂತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಇದರ ಹಿಂದೆ ಸಂಗಮೇಶ್ವರ್ ಅವರನ್ನು ಸೋಲಿಸುವ ಹುನ್ನಾರವಿದೆ. ಎಲ್ಲರೂ ಒಗ್ಗೂಡಬೇಕು. ಕಾರ್ಯಕರ್ತರು ಎಚ್ಚರವಾಗಬೇಕು.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ

ತಾಲೂಕು ಕಚೇರಿ ಆವರಣದಲ್ಲಿ ಬಿಜೆಪಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಉದ್ದೇಶ ಪೂರ್ವಕವಾಗಿಯೇ ಗಲಭೆ ಮಾಡಲಾಗಿದೆ. ಹೀಗಿದ್ದರೂ ನಮ್ಮ ಮೇಲೆಯೇ ಕೇಸ್ ದಾಖಲಿಸುವ ಮೂಲಕ ದುರಾಡಳಿ ಪ್ರದರ್ಶಿಸಿದ್ದಾರೆ. ಸುಳ್ಳು ಕೇಸ್ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಭದ್ರಾವತಿಯಲ್ಲಿ ನಿಷೇಧಾಜ್ಞೆ ಹೇರಿ‌ ಆದೇಶ, ಎಲ್ಲಿಯವರೆಗೆ ಇರಲಿದೆ 144, ಕಾರಣವೇನು?

ಕೋಮು ಸೌಹಾರ್ದ ವೇದಿಕೆಯ ಹೋರಾಟಗಾರ ಕೆ.ಎಲ್.ಅಶೋಕ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಎಸ್.ಪಿ.ದಿನೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಗಿ ಬಂದೋಬಸ್ತ್ | ಕಾನೂನು ಸುವ್ಯವಸ್ಥೆ ದೃಷ್ಟಿಕೋನದಿಂದ ಐಜಿಪಿ ರವಿ, ಎಸ್.ಪಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಎಸ್.ಪಿ ಎಚ್.ಟಿ.ಶೇಖರ್ ಪ್ರತಿಭಟನಾ ಸ್ಥಳದಲ್ಲಿಯೇ ಇದ್ದರು.

error: Content is protected !!