ಸಂಭ್ರಮ ಮರೆಮಾಚಿದ ಕೊರೊನಾ ಎರಡನೇ ಅಲೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಎರಡನೇ ಅಲೆಯ ಸೋಂಕು ಹರಡಬಾರದೆಂದು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಮಧ್ಯೆಯೂ ಜಿಲ್ಲೆಯಾದ್ಯಂತ ವಿವಿಧೆಡೆ ಬಣ್ಣ ಎರಚಿ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬರುತ್ತಿವೆ.
ಮಕ್ಕಳು ಕಾಮಣ್ಣನ ಪ್ರತಿಕೃತಿ ಮಾಡಿ ಮನೆ ಮನೆಗಳಿಗೆ ಭೇಟಿ ನೀಡಿ ಅಕ್ಕಿ, ಹಣ, ಸೌದೆ ಸಂಗ್ರಹಿಸುತ್ತಿದ್ದಾರೆ. ಭಾನುವಾರ ರಾತ್ರಿ ಕಾಮಣ್ಣನನ್ನು ಸುಟ್ಟ ಮಾರನೇ ದಿನ ಬಣ್ಣದಾಟ ಆಡುವುದು ಸಂಪ್ರದಾಯ. ಆದರೆ, ಈ ಸಲ ಕೊರೊನಾದಿಂದಾಗಿ ಹಬ್ಬದ ಸಂಭ್ರಮ ಅಷ್ಟೊಂದು ಕಂಡುಬರುತ್ತಿರಲಿಲ್ಲ.
ಅಂಗಡಿಗಳಲ್ಲಿ ಬಣ್ಣ ಖರೀದಿಗೆ ಸಾಕಷ್ಟು ಜನರಿರುತ್ತಿದ್ದರು. ಈ ಸಲ ಹೇಳಿಕೊಳ್ಳುವಷ್ಟು ವ್ಯಾಪಾರ ವಹಿವಾಟು ಸಹ ಇಲ್ಲ.

error: Content is protected !!