ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಮದಗಹಾರನಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಹಿಡಿಯಲು ಯಶಸ್ವಿಯಾಗಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಕಳೆದ ಒಂದು ತಿಂಗಳಿಂದ ಗ್ರಾಮದ ಅಕ್ಕಪಕ್ಕ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯಿಂದಾಗಿ ಜನ ಓಡಾಡುವುದಕ್ಕೂ ಭಯಪಡುತ್ತಿದ್ದರು. ಅರಣ್ಯ ಇಲಾಖೆಗೆ ಈ ಕುರಿತು ದೂರು ನೀಡಿದ್ದರಿಂದ ಕಾರ್ಯಾಚರಣೆ ನಡೆಸಿ ಹಿಡಿಯಲಾಗಿದೆ.
ಇದನ್ನೂ ಓದಿ | ಮೂವರು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಹೇಗೆ ನಡೆಯಿತು ಘಟನೆ?
2 ದಿನ ಕಾರ್ಯಾಚರಣೆ | ಎಲ್ಲಿ ಯಾರ ಮೇಲೆ ದಾಳಿ ನಡೆಸುತ್ತೋ ಎಂಬ ಭಯದಿಂದಾಗಿ ಜನರು ಸಂಜೆ ಮತ್ತು ನಸುಕಿನಲ್ಲಿ ಜಮೀನುಗಳಿಗೆ ಹೋಗುವುದನ್ನೇ ಬಿಟ್ಟಿದ್ದರು. ದೂರು ನೀಡಿದ ಬಳಿಕ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ, ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದೆ. ಚಿರತೆಯನ್ನು ಹಿಡಿಯುವುದಕ್ಕಾಗಿ ಬೋನು ಇಡಲಾಗಿತ್ತು. ಆ ಬೋನಿಗೆ 5 ವರ್ಷದ ಗಂಡು ಚಿರತೆ ಬಿದ್ದಿದೆ.