BHADRAVATHI | ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಹಾವೇರಿಯ ರಾಣೆಬೆನ್ನೂರು ನಿವಾಸಿ ಜಬೀವುಲ್ಲಾ ದ್ಯಾವನಕಟ್ಟೆ (29) ಎಂಬಾತನನ್ನು ಬಂಧಿಸಲಾಗಿದೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಆರೋಪಿ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಲಾಗಿತ್ತು.
ಆರೋಪಿಯ ಪತ್ತೆಗಾಗಿ ಭದ್ರಾವತಿ ಪೇಪರ್ ಟೌನ್ ಪೆÇಲೀಸ್ ಠಾಣೆ ಪಿ.ಎಸ್.ಐ ಶಿಲ್ಪ ನಾಯನೇಗಲಿ ಅವರು ತಮ್ಮ ಠಾಣೆಯ ಹೆಡ್ ಕಾನ್ಸ್ ಟೆಬಲ್ ಗಂಗಾಧರ್ ಅವರನ್ನು ನಿಯೋಜಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಆತನ ಮನೆ ಮೇಲೆ ದಾಳಿ ನಡೆಸಿ ಶನಿವಾರ ಬಂಧಿಸಲಾಗಿದೆ.
ಆರೋಪಿ ಜಬೀವುಲ್ಲಾ ವಿರುದ್ಧ 2014ರಲ್ಲಿ ಕಲಂ 279, 304(ಎ) ಐಪಿಸಿ ಹಾಗೂ 187 ಐಎಂವಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

error: Content is protected !!