ಕರ್ಫ್ಯೂ ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ಮೇಲೆ ಬಿತ್ತು ಕೇಸ್, ದಾಖಲಾದ ಪ್ರಕರಣಗಳೆಷ್ಟು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ 17 ಅಂಗಡಿ ಮಾಲೀಕರ ವಿರುದ್ಧ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ 2, ಹೊಸನಗರ ಠಾಣೆ 4, ಕೋಟೆ ಠಾಣೆ 1, ತೀರ್ಥಹಳ್ಳಿ ಠಾಣೆ 10 ಪ್ರಕರಣಗಳು ಸೇರಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಲಾಗಿದೆ‌.
ಹತ್ತು ವಾಹನಗಳು ವಶಕ್ಕೆ | ಒಟ್ಟು 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಂವಿ‌ ಕಾಯ್ದೆ ಅಡಿಯಲ್ಲಿ ಒಟ್ಟು 163 ಪ್ರಕರಣಗಳನ್ನು ದಾಖಲಿಸಿ 77,600 ರೂಪಾಯಿ ದಂಡ ವಿಧಿಸಲಾಗಿದೆ.

error: Content is protected !!