ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಪುಟಾಣಿ ಆನೆಗಳ ಚಿನ್ನಾಟ ನೋಡುವುದೇ ಒಂದು ಸೊಗಸು. ಈ ಆನೆ ಕುಟುಂಬಕ್ಕೆ ಗುರುವಾರ ರಾತ್ರಿ ಮತ್ತೊಂದು ಅತಿಥಿಯ ಆಗಮನವಾಗಿದೆ. ಎಲ್ಲರಲ್ಲೂ ಖುಷಿ ಮನೆ ಮಾಡಿದೆ. ಆದರೆ, ಜನ್ಮ ನೀಡಿರುವ ತಾಯಿ ಮಾತ್ರ ನತದೃಷ್ಟೆ!
VIDEO REPORT
ಈ ತಾಯಿಗೆ ಹುಟ್ಟುವ ಮಕ್ಕಳು ಹೆಚ್ಚು ದಿನ ಬದುಕುವುದೇ ಇಲ್ಲ. ಈಗಾಗಲೇ ಎರಡು ಮರಿಗಳನ್ನು ಇದು ಕಳೆದುಕೊಂಡಿದೆ. ಮೂರನೆ ಮರಿಗೆ ಜನ್ಮ ನೀಡಿದ್ದು, ಅದೂ ಪ್ರಿಮೆಚ್ಯೂರ್ ಡೆಲಿವರಿಯಾಗಿದೆ.
2014ರಲ್ಲಿ ಹಾಸನದಲ್ಲಿ ಭಾನುಮತಿ ಆನೆಯನ್ನು ಹಿಡಿದು ಸಕ್ರೆಬೈಲು ಆನೆಬಿಡಾರಕ್ಕೆ ಕರೆತರಲಾಗಿದೆ. ಈಗ 30-32 ವರ್ಷದವಳಾದ ಈಕೆ ಈಗಾಗಲೇ ಎರಡು ಮರಿಗಳನ್ನು ಜನ್ಮ ನೀಡಿ ಕಳೆದುಕೊಂಡಿದ್ದಾಳೆ.
ಸಾಮಾನ್ಯವಾಗಿ ಮರಿಗೆ ಜನ್ಮ ನೀಡಿದ ತಕ್ಷಣ ಎದೆ ಹಾಲು ಉತ್ಪತ್ತಿಯಾಗುತ್ತವೆ. ಆದರೆ, ಭಾನುಮತಿ ಈ ಮಾತೃತ್ವ ಅನುಭವದಿಂದ ವಂಚಿತಳಾಗಿದ್ದಾಳೆ. ಎದೆ ಹಾಲು ಉತ್ಪತ್ತಿ ಆಗದೇ ಇರುವುದರಿಂದ ಮರಿಗೆ ಹಾಲುಣಿಸಲು ಸಾಧ್ಯವೇ ಆಗುವುದಿಲ್ಲ. ಹೀಗಾಗಿ, ಅದಕ್ಕೆ ಬಾಟಲ್ ಹಾಲೇ ಗತಿ. ಈ ಮರಿಯಾದರೂ ಬದುಕುಳಿಯಲಿ ಎಂಬುವುದೇ ಎಲ್ಲರ ಆಶಯವಾಗಿದೆ.