ಸುದ್ದಿ ಕಣಜ.ಕಾಂ
ಶಿವಮೊಗ್ಗ: ‘ಬಿಗ್ ಬಾಸ್ ಸೀಸನ್ 8’ಗೆ ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕಾ ತಿಮ್ಮೇಶ್ ಅವರು ಎಂಟ್ರಿ ಕೊಟ್ಟಿದ್ದಾರೆ.
READ | ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, ಮುಂದೇನಾಯ್ತು?
ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ತಿಮ್ಮೇಶ್ ಮತ್ತು ಗಿರಿಜಾ ಅವರ ಪುತ್ರಿಯಾಗಿರುವ ಇವರು ಭದ್ರಾವತಿಯ ಸೇಂಟ್ ಚಾಲ್ರ್ಸ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ, ಶಿವಮೊಗ್ಗದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಮಾಡಿದ್ದಾರೆ.
ಬೆಳ್ಳಿ ಪರದೆಗೆ ಪ್ರಿಯಾಂಕಾ ಲಗ್ಗೆ | ‘ಪ್ರೀತಿಯಿಂದ’ ಸೀರಿಯಲ್ ಮೂಲಕ ಪ್ರಿಯಾಂಕಾ ಅವರ ಬಣ್ಣದ ಲೋಕದ ಪ್ರಯಾಣ ಶುರುವಾಗಿತು. ಇದಾದ ನಂತರ, 2015ರಲ್ಲಿ ‘ಗಣಪ’, 2016ರಲ್ಲಿ ‘ಅಕಿರಾ’, 2017ರಲ್ಲಿ ‘ಪಟಾಕಿ’, 2020ರಲ್ಲಿ ‘ಭೀಮಸೇನ ಮಹಾರಾಜ’ ಸೇರಿದಂತೆ 2018ರಲ್ಲಿ ಮಲಯಾಳಂ, ತಮಿಳುನಾಡು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.