ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಒಂದೇ ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದಿದೆ. ಶಿಕಾರಿಪುರ ತಾಲೂಕಿನ 69 ವರ್ಷದ ವ್ಯಕ್ತಿ ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾರೆ.
READ |ಭದ್ರಾವತಿಯಲ್ಲಿ ಕೊರೊನಾ ಮಹಾಸ್ಫೋಟ, ಒಂದೇ ದಿನ 124 ಜನರಿಗೆ ಸೋಂಕು
ಇವರು ಇತ್ತೀಚೆಗೆ ನೇಪಾಳ ಟ್ರಿಪ್ ಗೆ ಹೋಗಿದ್ದರು. ಪ್ರಯಾಣ ಮುಗಿಸಿಕೊಂಡು ವಾಪಸ್ ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ಇವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಪಾಸಿಟಿವ್ ಬಂದಿದೆ. ಇವರನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತಪಟ್ಟಿದ್ದಾರೆ.