ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪೊಲೀಸ್ ಇಲಾಖೆ ವೀಕೆಂಡ್ ನಲ್ಲಿ ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಭಾನುವಾರವೊಂದೇ ದಿನ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಜನರಿಂದ 80,800 ರೂಪಾಯಿ ದಂಡ ವಸೂಲಿ ಮಾಡಿದೆ.
READ | ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು
517 ಪ್ರಕರಣ ದಾಖಲಿಸಿ ವಾರ್ನಿಂಗ್ ನೀಡಿದೆ. ನಗರದ ಪ್ರಮುಖ ರಸ್ತೆ, ಜನನಿಬಿಡ ಪ್ರದೇಶ, ವೃತ್ತಗಳಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಮಾಸ್ಕ್ ಧರಿಸದೇ ಬಂದವರಿಗೆ ಶಾಕ್ ನೀಡಿದ್ದಾರೆ.
ಮಾರ್ಕೆಟ್, ವೀಕೆಂಡ್ ಟ್ರಿಪ್ ಗೋಸ್ಕರ ಕುಟುಂಬದೊಂದಿಗೆ ಹೊರ ಬಂದವರಿಗೂ ದಂಡ ವಿಧಿಸಲಾಗಿದೆ.
ಬಸ್ಸಿನಲ್ಲೂ ನಡೀತು ಪರಿಶೀಲನೆ | ಸಾರ್ವಜನಿಕರು ಬಸ್ಸಿನಲ್ಲಿ ಮಾಸ್ಕ್ ಧರಿಸುವುದಕ್ಕೆ ಉಪೇಕ್ಷೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ಬಸ್ ಗಳಲ್ಲಿ ಪರಿಶೀಲನೆ ನಡೆಸಲಾಯಿತು.
ತಾಲೂಕುವಾರು ದಂಡದ ಮಾಹಿತಿ
ತಾಲೂಕು | ಪ್ರಕರಣ | ದಂಡ (ರೂ.ಗಳಲ್ಲಿ) |
ಶಿವಮೊಗ್ಗ | 285 | 57,600 |
ಶಿಕಾರಿಪುರ | 120 | 12,000 |
ಭದ್ರಾವತಿ | 26 | 2,600 |
ಸಾಗರ | 40 | 4,000 |
ತೀರ್ಥಹಳ್ಳಿ | 46 | 4,600 |
ಒಟ್ಟು | 517 | 80,800 |
ಮಾಸ್ಕ್ ಧರಿಸದವರಿಗೆ ದಂಡ, ಒಂದೇ ತಿಂಗಳಲ್ಲಿ 2.23 ಲಕ್ಷ ರೂ. ಫೈನ್, ಯಾವ ತಾಲೂಕಿನಲ್ಲಿ ಎಷ್ಟು ದಂಡ?