ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ಮೊದಲ ದಿನವೇ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರ ಮೇಲೆ ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಿದ್ದಾರೆ.
READ | ಒಂದೇ ದಿನ ಐವರ ಬಲಿ ಪಡೆದ ಕೊರೊನಾ, ಎಲ್ಲೆಲ್ಲಿ ಸಾವು ಇಲ್ಲಿದೆ ಡಿಟೇಲ್ಸ್, ಮೂರು ಹೊಸ ದಾಖಲೆ ಸೃಷ್ಟಿ
88 ದ್ವಿ ಚಕ್ರ ಮತ್ತು 12 ಕಾರು ಸೇರಿ ಒಟ್ಟು 100 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು 245 ಪ್ರಕರಣಗಳನ್ನು ದಾಖಲಿಸಿ 1,16,600 ರೂಪಾಯಿ ದಂಡ ವಿಧಿಸಲಾಗಿದೆ.
ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ.