ಗರ್ಭಿಣಿಯೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಲ್ಲಿ ಸಿಕ್ಕಿದ್ದು 6 ಕೆ.ಜಿ. ಗಡ್ಡೆ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗರ್ಭಿಣಿಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆಯ ಹೊಟ್ಟೆಯಿಂದ ಆರು ಕೆ.ಜಿ. ಮಾಂಸದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.

READ | ಹೋರಾಟದ ಮುಂದಾಳತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಕೋಲಾರ, ರಾಮನಗರಕ್ಕೆ ಎತ್ತಂಗಡಿ!

ಮಹಿಳೆಯ ಹೊಟ್ಟೆಯಲ್ಲಿ ಆರು ತಿಂಗಳ ಭ್ರೂಣ ಇದೆ ಎಂದು ಭಾವಿಸಲಾಯಿತ್ತು. ಇದೇ ಸಂತಸದಿಂದ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವ ಶಾಕಿಂಗ್ ವಿಚಾರ ಗೊತ್ತಾಗಿದೆ.

ಮೊದಲು ಕಡೂರಿನ ಆಸ್ಪತ್ರೆಗೆ ಕರೆದೊಯ್ದಾಗ ಗಡ್ಡೆ ಇರುವುದು ತಿಳಿದುಬಂದಿದೆ. ನಂತರ ಶಿವಮೊಗ್ಗದಲ್ಲಿ ವೈದ್ಯರಾದ ಡಾ.ಮಧು, ಡಾ.ಚಂಪಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ.

error: Content is protected !!