ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಏಪ್ರಿಲ್ 22 ರಿಂದ ನಿಗದಿಪಡಿಸಿದ್ದ ಏಪ್ರಿಲ್/ ಮೇ 2020ರ ವಾಣಿಜ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ.
ಶೀಘ್ರಲಿಪಿ, ಮುದ್ರಣ ಹಾಗೂ ಬರವಣಿಗೆಯ ಪರೀಕ್ಷೆಗಳನ್ನು ಕೋವಿಡ್-19ರ ಸಾಂಕ್ರಾಮಿಕ ರೋಗಾಣು ಹರಡುವುದನ್ನು ತಡೆಗಟ್ಟಲು ಸರ್ಕಾರ ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೂಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕಗಳನ್ನು ನಂತರದ ದಿನಗಳಲ್ಲಿ ಅಂತರ್ಜಾಲ http://www.kseeb.kar.nic.in ರಲ್ಲಿ ಪ್ರಕಟಿಸಲಾಗುವುದು ಎಂದು ಮಂಡಳಿಯ ಇತರೆ ಪರೀಕ್ಷೆಗಳ ನಿರ್ದೇಶಕಿ ಎಸ್.ಗೀತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.