ರಸ್ತೆ ಮೇಲೆ ಕೊರೊನಾ ಪಾಸಿಟಿವ್ ಪೇಷಂಟ್, ಪೊಲೀಸರು ತಬ್ಬಿಬ್ಬು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಕೊರೊನಾ ಸೋಂಕಿತನೊಬ್ಬ ಪ್ರತ್ಯಕ್ಷನಾಗಿ ಪೊಲೀಸರು ಹಾಗೂ ಜನರು ತಬ್ಬಿಬ್ಬು ಆಗುವಂತೆ ಮಾಡಿದ್ದಾನೆ.

READ | ಹೇಗಿದೆ ವೀಕೆಂಡ್ ಕರ್ಫ್ಯೂ 2ನೇ ದಿನ, ಜನರ ಓಡಾಟ ಇದೆಯೇ?

ಬೈಕ್ ನಲ್ಲಿ ಬಂದಿದ್ದ ಆತನನ್ನು ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ. ಆಗ ತಾನು ಕೊರೊನಾ ರೋಗಿಯಾಗಿರುವುದಾಗಿ ತಿಳಿಸಿದ್ದಾನೆ. ಸುಳ್ಳು ಹೇಳುತ್ತಿರಬಹುದು ಎಂದು ಭಾವಿಸಿ ದಾಖಲೆಗಳನ್ನು ಕೇಳಿದ್ದಾರೆ. ಆಗ ಕೊರೊನಾ ಪಾಸಿಟಿವ್ ಬಂದಿರುವ ದಾಖಲೆಯನ್ನು ಪೊಲೀಸ್ ಸಿಬ್ಬಂದಿ ಕೈಗೆ ನೀಡಿದ್ದಾನೆ. ಪೊಲೀಸರು ಸೇರಿದಂತೆ ಎಲ್ಲರೂ ಇದರಿಂದ ಗಾಬರಿಯಾದರು. ಬಳಿಕ ರಸ್ತೆಯಲ್ಲಿ ಈ ರೀತಿ ಓಡಾಡಬೇಡ ಎಂದು ತಿಳಿಹೇಳಿ ಆತನನ್ನು ಮನೆಗೆ ಹೋಗುವಂತೆ ಸೂಚನೆ ನೀಡಿದರು. ನಂತರ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು.

error: Content is protected !!