ಶಿವಮೊಗ್ಗದಲ್ಲಿ ಕೊರೊನಾ ಸ್ಫೋಟ, ಮುಂದುವರಿದ ಸಾವಿನ ಸರಣಿ, ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ರಣ ಕೇಕೆ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ 846 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 505 ಜನ ಗುಣಮುಖರಾಗಿದ್ದಾರೆ.

READ | 18 ವರ್ಷ ಮೇಲ್ಪಟ್ಟವರಿಗೆ ನಾಳೆ ಕೊರೊನಾ ಲಸಿಕೆ ನೀಡಲಾಗುತ್ತಿಲ್ಲ, ಯಾವಾಗಿಂದ ನೀಡಲಿದ್ದಾರೆ, ಆನ್ಲೈನ್ ನಲ್ಲಿ ನೋಂದಣಿ ಆದರೆ ಮಾತ್ರ ಲಸಿಕೆ

21 ವಿದ್ಯಾರ್ಥಿಗಳು, 15 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆರು ಜನ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 380ಕ್ಕೆ ಏರಿಕೆಯಾಗಿದೆ.
ಎರಡೂವರೆ ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 459, ಕೋವಿಡ್ ಕೇರ್ ಸೆಂಟರ್ ನಲ್ಲಿ 17, ಖಾಸಗಿ ಆಸ್ಪತ್ರೆಯಲ್ಲಿ 333, ಹೋಮ್ ಐಸೋಲೇಷನ್ ನಲ್ಲಿ 1,798 ಟ್ರಿಯೇಜ್ ನಲ್ಲಿ 173 ಸೇರಿ ಒಟ್ಟು 2,798 ಸಕ್ರಿಯ ಪ್ರಕರಣಗಳಿವೆ.

READ | ಕೊರೊನಾ ಹೈ ಅಲರ್ಟ್, ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ಗಳಲ್ಲಿ ವೈದ್ಯರ ಹೆಸರು ಪ್ರಕಟ, ಕರ್ತವ್ಯ ಲೋಪ ಎಸಗಿದರೆ ಕ್ರಮ

ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಸೋಂಕು ಸ್ಫೋಟ ಮುಂದುವರಿದಿದೆ. ಇಂದು ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು 252, ಭದ್ರಾವತಿ 130, ಶಿಕಾರಿಪುರ 99, ತೀರ್ಥಹಳ್ಳಿ 55, ಸೊರಬ 79, ಸಾಗರ 183, ಹೊಸನಗರ 18, ಹೊರ ಜಿಲ್ಲೆಯ 30 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

https://www.suddikanaja.com/2020/11/18/indian-cricket-team-practice-match/

error: Content is protected !!