ಮೋಸ ಹೋಗಿದ್ದು ಹೇಗೆ | ಫೇಸ್ಬುಕ್ ನಲ್ಲಿ ಖಾಸಗಿ ಕಂಪನಿಯೊಂದರ ಹೆಸರಿನಲ್ಲಿ ಒಂದು ಜಾಹೀರಾತು ಪ್ರಕಟಿಸಿದ್ದು, ಅದನ್ನು ನೋಡಿದ ವ್ಯಕ್ತಿಯು ಜಾಹೀರಾತಿನಲ್ಲಿದ್ದ ಅರ್ಜಿಯನ್ನು 2021ರ ಮಾರ್ಚ್ 25ರಂದು ತುಂಬಿ ಕಳುಹಿಸಿದ್ದರು. ನಂತರ 27ರಂದು ಏಜೆನ್ಸಿಯಿಂದ ಹೆಸರಿನಿಂದ ಕರೆ ಮಾಡಿರುವುದಾಗಿ ಅಪರಿಚಿತರು ತಿಳಿಸಿದ್ದಾರೆ. ಪಾಯಿಂಟ್ ಗೋಸ್ಕರ ಕಂಪ್ಯೂಟರ್, ಸ್ಕ್ಯಾನರ್, ಸಿಸಿ ಟಿವಿ ಕ್ಯಾಮೆರಾ, ಒ.ಡಿ.ಡಿಪಾಸಿಟ್ ಹಣ ಇತ್ಯಾದಿ ಕಾರಣಗಳನ್ನು ನೀಡಿ ಹಣ ಸಂದಾಯ ಮಾಡುವಂತೆ ಸೂಚಿಸಿದ್ದಾರೆ. ಅದರಂತೆ, ವ್ಯಕ್ತಿಯು ಹಂತ ಹಂತವಾಗಿ ಅವರು ಕಳುಹಿಸಿದ್ದ ಖಾತೆಗೆ ಒಟ್ಟು 60,500 ರೂಪಾಯಿ ಜಮಾ ಮಾಡಿದ್ದಾರೆ. ಆದರೆ, ಮಾತಿನಂತೆ ಯಾವುದೇ ಪಾಯಿಂಟ್ ನೀಡದೇ ಮೋಸ ಮಾಡಿದ್ದಾರೆ. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ಶಿವಮೊಗ್ಗ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.