ಭದ್ರಾವತಿ, ಶಿವಮೊಗ್ಗದಲ್ಲಿ ಮುಂದುವರಿದ ಕೊರೊನಾ ಆರ್ಭಟ, ಒಂದೇ‌ ದಿನ ಒಂದೂವರೆ ಶತಕ

 

 

ಸುದ್ದಿ‌‌ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ, ಭದ್ರಾವತಿಯಲ್ಲಿ ಭಾನುವಾರ ಕ್ರಮವಾಗಿ 55 ಮತ್ತು 47 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ವಿದ್ಯಾರ್ಥಿಗಳು ಹಾಗೂ ನಾಲ್ವರು ಸಿಬ್ಬಂದಿ ಸೇರಿ‌ ಒಟ್ಟು 155 ಜನರಲ್ಲಿ‌ ಕೊರೊನಾ ದೃಢಪಟ್ಟಿದ್ದು, 103 ಜನರನ್ನು ಬಿಡುಗಡೆಗೊಳಿಸಲಾಗಿದೆ.

ಕ್ರಿಯ ಪ್ರಕರಣಗಳಲ್ಲಿ‌ ಏರಿಕೆ | ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್‌ ನಲ್ಲಿ 171, ಖಾಸಗಿ ಆಸ್ಪತ್ರೆಯಲ್ಲಿ 59, ಹೋಮ್‌ ಐಸೋಲೇಷನ್‌ 466 ಹಾಗೂ ಟ್ರಿಯೇಜ್‌ ನಲ್ಲಿ 35 ಜನ ಸೋಂಕಿತರಿದ್ದಾರೆ.

ತಾಲೂಕುವಾರು ಪಾಸಿಟಿವ್ | ಶಿವಮೊಗ್ಗ 55, ಭದ್ರಾವತಿ 47, ಶಿಕಾರಿಪುರ 7, ತೀರ್ಥಹಳ್ಳಿ 2, ಸೊರಬ 4, ಹೊಸನಗರ 22, ಸಾಗರ 9 ಹಾಗೂ ಹೊರ ಜಿಲ್ಲೆಯ 9 ಪ್ರಕರಣಗಳು ದೃಢಪಟ್ಟಿವೆ.

error: Content is protected !!