ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಬೈ ಎಲೆಕ್ಷನ್ ರಿಸಲ್ಟ್ ಹೇಳಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಹುಲ್ ಗಾಂಧಿ ಸಿಂಹವೋ, ನರಿಯೋ, ಇಲಿಯೋ ಎಂಬ ವಿಚಾರ ಉಪ ಚುನಾವಣೆ ಫಲಿತಾಂಶ ತಿಳಿಸಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

READ | ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೊರೊನಾಗೆ ಸಾವು 

ರಾಹುಲ್ ಗಾಂಧಿ ಅವರಿಗೆ ಬಿಜೆಪಿಯವರು ಭಯ ಪಡುತ್ತಾರೆ ಎಂಬ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ರಾಹುಲ್ ಬಗ್ಗೆ ನಮಗೆ ಅನುಕಂಪವಿದೆಯೇ ವಿನಹ ಭಯವಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಸೇರಿದಂತೆ ಅವರ ಅಮ್ಮ, ಅಜ್ಜಿ ತಮ್ಮ ಸ್ವ ಕ್ಷೇತ್ರ ಬಿಟ್ಟು ಏಕೆ ಬೇರೆಡೆ ಸ್ಪರ್ಧಿಸಿದರು, ರಾಹುಲ್ ಸಹ ಕೇರಳಾಕ್ಕೆ ಬಂದು ಸ್ಪರ್ಧಿಸಿದ್ದೇಕೆ ಎಂದು ಪ್ರಶ್ನಿಸಿದರು.
ಕಳೆದ ಸಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ರಾಹುಲ್ ಗಾಂಧಿಯೇ ಬಂದು ಮತಯಾಚನೆ ಮಾಡಿದ್ದರು. ಆದರೂ ಏಕೆ ಕಾಂಗ್ರೆಸ್ ಸೋಲುಂಡಿತು. ಹೀಗಾದರೂ ಖರ್ಗೆ ಅವರು ರಾಹುಲ್ ಅವರನ್ನು ಸಿಂಹವೆಂದು ಹೇಳಿದ್ದಾರೆ ಎಂದರು.

error: Content is protected !!