REALITY CHECK | ಬಸ್ ನಿಲ್ದಾಣದಲ್ಲಿಲ್ಲ ಸ್ಕ್ರೀನಿಂಗ್, ಸೋಶಿಯಲ್ ಡಿಸ್ಟೆನ್ಸ್, ವಹಿಸಬೇಕಿದೆ ಎಚ್ಚರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಬಸ್ ಗಳ ಓಡಾಟ ಪುನರಾರಂಭವಾಗಿದೆ. ಆದರೆ, ಜಿಲ್ಲಾಡಳಿತ ಹೇಳಿರುವಂತೆ ಇಲ್ಲಿ ಯಾವುದೇ ರೀತಿಯ ಸ್ಕ್ರೀನಿಂಗ್ ಮಾಡಲಾಗುತ್ತಿಲ್ಲ. ಪ್ರಯಾಣಿಕರ ಸಂಖ್ಯೆ ನಿತ್ಯಕ್ಕಿಂತ ಶೇ.70ರಷ್ಟು ಕಡಿಮೆ ಇದೆ. ಆದರೆ, ಇರುವವರ ನಡುವೆಯೂ ಸಾಮಾಜಿಕ ಅಂತರ ಕಾಪಾಡಲಾಗುತ್ತಿಲ್ಲ.

READ | ಮುಷ್ಕರ ವಾಪಸ್ ಬಳಿಕ ಮೊದಲ ದಿನ ಹೇಗಿದೆ ಬಸ್ ಸಂಚಾರ? ಬೆಳಗ್ಗೆಯಿಂದ ಸಂಚರಿಸಿದ ಬಸ್ ಗಳೆಷ್ಟು, ಪ್ರಯಾಣಿಕರಿದ್ದಾರಾ?

ರಾಜ್ಯದ ವಿವಿಧೆಡೆ ಸೋಂಕು ಹರಡುತ್ತಿದೆ. ಸೋಂಕು ಹೆಚ್ಚಿರುವ ಪ್ರದೇಶಗಳಿಂದಲೂ ಪ್ರಯಾಣಿಕರು ಬಸ್ ಮೂಲಕ ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ಹಾಗೂ ಇಲ್ಲಿಂದ ಬೇರೆಡೆಗೆ ಪ್ರಯಾಣಿಸುತ್ತಿದ್ದಾರೆ. ಇದರ ಮೇಲೆ ಕಣ್ಣಿಡುವ ಕೆಲಸ ಆಗುತ್ತಿಲ್ಲ. ಈಗಾಗಲೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿರುವ ಹಲವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಹೀಗಿರುವಾಗ, ಇದರೆಡೆ ನಿರ್ಲಕ್ಷ್ಯ ವಹಿಸುತ್ತಿರುವುದು ಬರುವ ದಿನಗಳಲ್ಲಿ ಸೋಂಕು ಏರಿಕೆಗೆ ಕಾರಣವಾಗಬಹುದು. ಹೀಗಾಗಿ, ಕಡ್ಡಾಯವಾಗಿ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಆದರೂ ಮಾಡಬೇಕೆನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಸೋಂಕು ತಡೆಗೆ ರಾಜ್ಯ ಸರ್ಕಾರ ಕಡ್ಡಾಯವಾಗಿ ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಅವಕಾಶ ನೀಡಬೇಕೆಂದು ಸೂಚನೆ ನೀಡಿದೆ. ಸದ್ಯ ಪ್ರಯಾಣಿಕರು ಇಲ್ಲದೇ ಇರುವುದರಿಂದ ಶೇ.30ರಷ್ಟು ಸೀಟ್ ತುಂಬುವುದೂ ಕಷ್ಟವಾಗಿದೆ. ಹೀಗಾಗಿ, ಬಸ್ ಗಳಲ್ಲಿ ಸಾಮಾಜಿಕ ಅಂತರ ಸದ್ಯದ ಸಮಸ್ಯೆಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕಿದೆ.

https://www.suddikanaja.com/2021/04/20/police-department-distributed-mask-in-publick-place/

error: Content is protected !!