ಒಂದೇ ದಿನ ಐವರ ಬಲಿ ಪಡೆದ ಕೊರೊನಾ, ಎಲ್ಲೆಲ್ಲಿ ಸಾವು ಇಲ್ಲಿದೆ ಡಿಟೇಲ್ಸ್, ಮೂರು ಹೊಸ ದಾಖಲೆ ಸೃಷ್ಟಿ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಐದು ಜನರನ್ನು ಕೊರೊನಾ ಬಲಿ ಪಡೆದಿದೆ. ಇದರಲ್ಲಿ ಮೂವರು ಮೆಗ್ಗಾನ್ ನಲ್ಲಿ ದಾಖಲಾಗಿದ್ದರೆ, ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

READ | ಹುಷಾರ್ ರಸ್ತೆಗಿಳಿದರೆ ಬೀಳುತ್ತೆ ದಂಡ

ಶಿವಮೊಗ್ಗ ತಾಲೂಕಿನವರು ಇಬ್ಬರು, ಸೊರಬ 1, ತೀರ್ಥಹಳ್ಳಿ 1 ಹಾಗೂ ಚಿಕ್ಕಮಗಳೂರು ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಲ್ಲಿ ಇದೇ ಮೊಟ್ಟ ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಸೋಂಕಿತರು ಸಾವಿಗೆ ಶರಣಾಗಿದ್ದಾರೆ. ಮೃತಪಟ್ಟವರೆಲ್ಲರೂ 40-45 ವರ್ಷ ಮೇಲ್ಪಟ್ಟವರೆಂದು ತಿಳಿದುಬಂದಿದೆ.

ಒಂದೇ ದಿನ ಮೃತರ ಸಂಖ್ಯೆ ಐದು, ಒಂದೇ ದಿನ 457 ಪಾಸಿಟಿವ್ ಪ್ರಕರಣ ಹಾಗೂ ಶಿವಮೊಗ್ಗ ತಾಲೂಕುವೊಂದರಲ್ಲೇ 240 ಪಾಸಿಟಿವ್. ಈ ಮೂರು ಹೊಸ‌ ದಾಖಲೆ‌ ಎರಡನೇ ಅಲೆ ಸೃಷ್ಟಿಸಿದೆ.

ಇಂದು ಕೊರೊನಾ ಮತ್ತೊಂದು ದಾಖಲೆ ಬರೆದಿದೆ. ಬುಧವಾರ 457 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 296 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಎಲ್ಲಿ ಎಷ್ಟು ಪ್ರಕರಣ | ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 295, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 12, ಖಾಸಗಿ ಆಸ್ಪತ್ರೆಯಲ್ಲಿ 268, ಹೋಮ್ ಐಸೋಲೇಷನ್‌ ನಲ್ಲಿ 1,545, ಟ್ರಿಯೇಜ್‌ ನಲ್ಲಿ 32 ಜನರಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,152 ತಲುಪಿದೆ.
ತಾಲೂಕುವಾರು ವರದಿ | ಶಿವಮೊಗ್ಗ 240, ಭದ್ರಾವತಿ 39, ಶಿಕಾರಿಪುರ 56, ತೀರ್ಥಹಳ್ಳಿ 30, ಸೊರಬ 45, ಸಾಗರ 14, ಹೊಸನಗರ 12, ಹೊರ ಜಿಲ್ಲೆಯ 21 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/04/27/covid-death-in-shivamogga/

error: Content is protected !!