ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕನ್ನಡದ ಕಿರುತೆರೆಯಲ್ಲಿ ವಿಲನ್ ಪಾತ್ರದ ಮೂಲಕ ಮನೆಯ ಮಾತಾಗಿರುವ ಸ್ನಿಗ್ಧ ಸುಂದರಿ ‘ಮಾನ್ಸಿ ಜೋಶಿ’ ಅವರು ‘ಪಾರು’ ಧಾರಾವಾಹಿಯ ಅನುಷ್ಕಾ ಪಾತ್ರ ಮುಕ್ತಾಯವಾಗುತ್ತಿರುವುದರಿಂದ ಹೊರಬರುತಿದ್ದಾರೆ.
ಈ ಬಗ್ಗೆ ಖುದ್ದು ಮಾನ್ಸಿ ಅವರೇ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ಎಲ್ಲ ಅಭಿಮಾನಿಗಳು ಮತ್ತು ಸ್ನೇಹಿತರಿಗೆ, ‘ಪಾರು’ ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದಲ್ಲಿ ನನ್ನ ಪಾತ್ರವು ಕೊನೆಗೊಂಡಿದೆ ಎಂದು ನೀವು ತಿಳಿಸಲು ನಾನು ಬಯಸುತ್ತೇನೆ.’ ಎಂದು ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದ ಮೂಲಕ ಮಾನ್ಸಿ ಎಲ್ಲರ ಮನೆ ಮಾತಾಗಿದ್ದಾರೆ. ‘ತನಗೆ ಇಂತಹ ಪಾತ್ರ ನೀಡಿ ಪ್ರೋತ್ಸಾಹಿಸಿದ್ದಕ್ಕೆ ಧಾರಾವಾಹಿಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.’
READ | ಮಲೆನಾಡಿನ ಬೆಡಗಿ ಬೆಳ್ಳಿತೆರೆಯಲ್ಲಿ ಹವಾ
ಬಹುಭಾಷೆಯಲ್ಲಿ ನಟನೆ | ಮಾನ್ಸಿ ಜೋಶಿ ಅವರು ‘ನಾಯಕಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರವಾದ ಸೌಜನ್ಯಾ ಆಗಿ ಬಣ್ಣ ಹಚ್ಚಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾ ಆಗಿ, ತಮಿಳಿನ ‘ಅನುಬುಡನ್ ಖುಷಿ’ ಸೀರಿಯಲ್ ನಲ್ಲಿ ನಾಯಕಿ ಖುಷಿ ಪಾತ್ರದಲ್ಲಿ ಮನರಂಜಿಸಿದ್ದಾರೆ. ಕಸ್ತೂರಿ ನಿವಾಸಿ ಸೀರಿಯಲ್ ನ ರಿಮೇಕ್ ನಲ್ಲೂ ನಟಿಸಿದ್ದಾರೆ. ಹೀಗೆ ಪರ ಭಾಷೆಯಲ್ಲೂ ತಮ್ಮ ನಟನೆಯಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.