ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 444 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ ಭದ್ರಾವತಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಭದ್ರಾವತಿಯಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ, ಜಿಲ್ಲೆಯಲ್ಲಿ ಒಂದೇ ದಿನ 15 ಸಾವು
ಶಿವಮೊಗ್ಗದಲ್ಲಿ 130, ಭದ್ರಾವತಿಯಲ್ಲಿ 148, ಶಿಕಾರಿಪುರ 25, ತೀರ್ಥಹಳ್ಳಿ 88, ಸೊರಬ 9, ಸಾಗರ 14, ಹೊಸನಗರ 5 ಹಾಗೂ ಹೊರ ಜಿಲ್ಲೆಯ 25 ಜನರಲ್ಲಿ ಸೋಂಕು ಕಂಡು ಬಂದಿದೆ.
7 ವಿದ್ಯಾರ್ಥಿಗಳು ಮತ್ತು 7 ಸಿಬ್ಬಂದಿಗೆ ಕೊರೊನಾ ತಗುಲಿದೆ. 309 ಜನ ಗುಣಮುಖರಾಗಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 520, ಡಿಸಿಎಚ್ಸಿ 86, ಕೋವಿಡ್ ಕೇರ್ ಸೆಂಟರ್ 86, ಖಾಸಗಿ ಆಸ್ಪತ್ರೆಯಲ್ಲಿ 366, ಹೋಮ್ ಐಸೋಲೇಷನ್ ನಲ್ಲಿ 3096 ಜನರಿದ್ದಾರೆ. ಒಟ್ಟು 4,124 ಸಕ್ರಿಯ ಪ್ರಕರಣಗಳು ಇವೆ.
16 ಮಂದಿ ಸಾವು | ಗುರುವಾರ 16 ಜನ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಶಿವಮೊಗ್ಗ ತಾಲೂಕು ಮುಂದೆ ಇದೆ. ಶಿವಮೊಗ್ಗದಲ್ಲಿ 4, ಭದ್ರಾವತಿ 2, ಶಿಕಾರಿಪುರ 2, ಹೊಸನಗರ 1, ತೀರ್ಥಹಳ್ಳಿ 1, ಸೊರಬ 1, ಸಾಗರ 3, ಹೊರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ.
ಎಮ್ಮೆ ಕದ್ದಿದ್ದಕ್ಕೆ ಯುದ್ಧವೇ ನಡೆದಿತ್ತು, ಶಿಲ್ಪದಲ್ಲಿ ಪತ್ತೆಯಾಯ್ತು ಹೊಸ ವಿಚಾರ, ಏನದು?