ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಲು ಮಕ್ಕಳ ಟೆಲಿ ಕೌನ್ಸಿಲಿಂಗ್ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ.ಸುರೇಶ್ ತಿಳಿಸಿದ್ದಾರೆ.
ಮಲೆನಾಡಿನ ಐದು ಜಿಲ್ಲೆಗಳಿಗೆ ವರವಾಗಲಿದೆ ಈ ಪ್ರಾಂತೀಯ ಕಚೇರಿ, ಏನಿದು, ಕಾರ್ಯನಿರ್ವಹಣೆ ಹೇಗೆ?
ಮಕ್ಕಳ ಟೆಲಿ ಕೌನ್ಸಿಲಿಂಗ್ ಟೋಲ್ ಫ್ರೀ ಸಂಖ್ಯೆ 14499 ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸಲಿದ್ದು, ಇದರ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗೂ ಸಮಾಲೋಚನೆ | ಇದಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾದ, ಪರಿತ್ಯಕ್ತ, ದೌರ್ಜನ್ಯಕ್ಕೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳ ನೆರವಿಗಾಗಿ ಆಪ್ತ ಸಮಾಲೋಚನೆ ನಡೆಸಲು ಸೌಲಭ್ಯ ಕಲ್ಪಿಸಲಾಗಿದೆ.
ಇದಕ್ಕಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು 080 4718117, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ 08182-295709, ಗಾಯತ್ರಿ ಡಿ.ಎಸ್ ರಕ್ಷಣಾಧಿಕಾರಿ 9945164983, ಗಣೇಶ್ ಹೆಚ್ ರಕ್ಷಣಾಧಿಕಾರಿ 7760802707, ಪರೀಕ್ಷಿತ್ ಆಪ್ತ ಸಮಾಲೋಚಕರು 8310605988 ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ.