ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗದಿಂದ ಬೆಂಗಳೂರು ಮತ್ತು ಮೈಸೂರಿಗೆ ಸಂಚರಿಸುವ ಎಲ್ಲ ರೈಲುಗಳನ್ನು ಜನಸಂಚಾರ ಕಡಿಮೆ ಇರುವುದರಿಂದಾಗಿ ರದ್ದುಪಡಿಸಲಾಗಿದೆ.
READ | ವಚನಗಳನ್ನು ಉರ್ದುಗೆ ತರ್ಜುಮೆ ಮಾಡಿದ ಶಾಹದ್ ಬಾಗಲಕೋಟೆ ನಿಧನ, ಬೋಧನೆಗೆಂದು ಮಲೆನಾಡಿಗೆ ಬಂದಿದ್ದರು
ಶಿವಮೊಗ್ಗದಿಂದ ಮೈಸೂರಿಗೆ ಪ್ರಯಾಣಿಸುವ ಒಂದು ರೈಲು ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ರೈಲು ಸಂಖ್ಯೆ 06228 ಶಿವಮೊಗ್ಗದಿಂದ ರಾತ್ರಿ 10.45 ಗಂಟೆಗೆ ಹೊರಟು ಬೆಳಗ್ಗೆ 5ಕ್ಕೆ ಬೆಂಗಳೂರು ಮತ್ತು ಮೈಸೂರಿಗೆ ಬೆಳಗ್ಗೆ 8ಕ್ಕೆ ತಲುಪುತ್ತದೆ.
ರೈಲು ಸಂಖ್ಯೆ 06227 ಮೈಸೂರಿನಿಂದ ಸಂಜೆ 7ಕ್ಕೆ ಬಿಟ್ಟು ಬೆಂಗಳೂರಿಗೆ ರಾತ್ರಿ 10 ಗಂಟೆಗೆ ತಲುಪುತ್ತದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಟು ಶಿವಮೊಗ್ಗಕ್ಕೆ ಬೆಳಗ್ಗೆ 4ಕ್ಕೆ ತಾಳಗುಪ್ಪಕ್ಕೆ ಬೆಳಗ್ಗೆ 6.30 ಗಂಟೆಗೆ ತಲುಪುತ್ತದೆ.
ಇನ್ನುಳಿದಂತೆ ಜನ್ ಶಾತಾಬ್ದಿ ಸೇರಿ ಎಲ್ಲ ರೈಲುಗಳ ಸಂಚಾರ ರದ್ದುಗೊಂಡಿದೆ.