ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಮಾರಣಹೋಮ ಜಿಲ್ಲೆಯಲ್ಲಿ ಮುಂದುವರಿದಿದೆ. ಮಂಗಳವಾರ 15 ಜನ ಸಾವನ್ನಪ್ಪಿದ್ದು, ಎರಡನೇ ಅಲೆಯಲ್ಲೇ ಇದು ದಾಖಲೆಯಾಗಿದೆ. ಈ ಹಿಂದೆ ಒಂದೇ ದಿನ 12 ಜನ ಮೃತಪಟ್ಟಿದ್ದರು.
https://www.suddikanaja.com/2021/04/14/man-dead-due-to-covid-2/
ಶಿವಮೊಗ್ಗ ತಾಲೂಕಿನಲ್ಲಿ ಅತಿ ಹೆಚ್ಚು ಐವರು ಮೃತಪಟ್ಟರೆ, ಇನ್ನುಳಿದಂತೆ ಭದ್ರಾವತಿಯಲ್ಲಿ ಇಬ್ಬರು, ಹೊಸನಗರದಲ್ಲಿ ನಾಲ್ಕು ಮಂದಿ, ಸಾಗರದಲ್ಲಿ ಇಬ್ಬರು, ಶಿಕಾರಿಪುರದಲ್ಲಿ ಒಂದು ಮತ್ತು ಹೊರ ಜಿಲ್ಲೆಯ ಒಬ್ಬರು ಅಸುನೀಗಿದ್ದಾರೆ. ಸೋಂಕಿತರ ನಿರಂತರ ಸಾವು ಜನರಲ್ಲಿ ಭೀತಿ ಹುಟ್ಟಿಸಿದೆ.
ಸಕ್ರಿಯ ಪ್ರಕರಣದಲ್ಲಿ ಏರಿಕೆ | ಜಿಲ್ಲೆಯಲ್ಲಿ ಪ್ರಸಕ್ತ 3,489 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಮಂಗಳವಾರ 612 ಜನರಲ್ಲಿ ಕೊರೊನಾ ಪಾಸಿಟಿವ್ ಇದೆ. 23 ವಿದ್ಯಾರ್ಥಿಗಳು, 10 ಸಿಬ್ಬಂದಿ ಕೂಡ ಇದ್ದಾರೆ. 642 ಜನ ಗುಣಮುಖರಾಗಿದ್ದಾರೆ.
ಮೆಗ್ಗಾನ್ ನಲ್ಲಿ 236, ಡಿ.ಸಿ.ಎಚ್.ಸಿಯಲ್ಲಿ 133, ಕೋವಿಡ್ ಕೇರ್ ಸೆಂಟರ್ ನಲ್ಲಿ 174, ಖಾಸಗಿ ಆಸ್ಪತ್ರೆಯಲ್ಲಿ 255, ಹೋಂ ಐಸೋಲೇಷನ್ ನಲ್ಲಿ 2676, ಟ್ರಿಯೇಜ್ ನಲ್ಲಿ 15 ಜನರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 230, ಭದ್ರಾವತಿ 62, ಶಿಕಾರಿಪುರ 50, ತೀರ್ಥಹಳ್ಳಿ 39, ಸೊರಬ 48, ಸಾಗರ 124, ಹೊಸನಗರ 16, ಹೊರ ಜಿಲ್ಲೆಯ 43 ಮಂದಿಗೆ ಕೊರೊನಾ ತಗುಲಿದೆ.
https://www.suddikanaja.com/2021/04/22/corona-case-increasing-in-shivamogga/