ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮನುಷ್ಯರೇ ಕಾಲು ಮುರಿದು ರಸ್ತೆ ಬದಿಗೆ ಬಿದ್ದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾಲವಿದು. ಆದರೆ, ಆರ್.ಎಫ್.ಒವೊಬ್ಬರು ಮೊಳಕಾಲು ತೀವ್ರ ಗಾಯಗೊಂಡು ನರಳುತಿದ್ದ ನವಿಲಿಗೆ ಚಿಕಿತ್ಸೆ ಕೊಡಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಗಾಯಗೊಂಡು ರಸ್ತೆಯ ಬದಿ ಬಿದ್ದಿದ್ದ ನವಿಲನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ನವಿಲನ್ನು ಶಿವಮೊಗ್ಗದ ವೆಟರ್ನರಿ ಕಾಲೇಜಿಗೆ ತೆಗೆದುಕೊಂಡು ಬಂದು ಬಲ ಗಾಲಿನ ಮೊಣಕಾಲಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಮುರಿದಿದ್ದ ಮೂಳೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿ ಅದಕ್ಕೆ ಜೀವದಾನ ನೀಡಿದ್ದಾರೆ.