ಮರಕ್ಕೆ ಅಪ್ಪಳಿಸಿದ ಟ್ಯಾಂಕರ್, ಪಾದಾಚಾರಿ ಸ್ಥಳದಲ್ಲೇ ಸಾವು

 

 

ಸುದ್ದಿ ಕಣಜ.ಕಾಂ

ಸೊರಬ: ಅತಿ ವೇಗವಾಗಿ ಬಂದ ಖಾಲಿ ಟ್ಯಾಂಕರ್ ವೊಂದು ಪಾದಾಚಾರಿಗೆ ಡಿಕ್ಕಿ ಹೊಡೆದಿದ್ದು, ಆತ ಮೃತಪಟ್ಟಿದ್ದಾನೆ.

READ | ಕೋವಿಡ್ ವಾರ್ಡ್ ನಿಂದ ಹೊರಬಂದ ಸೋಂಕಿತ, ಜನರಲ್ಲಿ ಆತಂಕ

ಅಂಕರವಳ್ಳಿಯಲ್ಲಿ ಗುರುವಾರ ಘಟನೆ ನಡೆದಿದ್ದು, ಹನೀಫ್ ಸಾಬ್(55) ಎಂಬಾತ ಮೃತಪಟ್ಟಿದ್ದಾನೆ. ಘಟನೆಯ ತೀವ್ರತೆಗೆ ಲಾರಿ ಮುಂಭಾಗ ನಜ್ಜು ಗುಜ್ಜಾಗಿದ್ದು, ಮರ ಕೂಡ ಧರೆಗೆ ಕುಸಿದಿದೆ.

ಗಾಯಗೊಂಡಿರುವ ಲಾರಿ ಚಾಲಕ ಕಿರಣ್, ಚಂದ್ರಗುತ್ತಿಯ ಮಹೇಶ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!