BOOK REVIEW | ‘ಸಾಧ್ಯ ಅಸಾಧ್ಯಗಳ ನಡುವೆ’ ರೋಚಕ ಕಥೆ

 

 

ಸುದ್ದಿ ಕಣಜ.ಕಾಂ
ಹಲವು ಫಿಕ್ಷನ್(ಕಲ್ಪನೆ)ಗಳ ನಡುವೆ ಸಾಗುವ ‘ಸಾಧ್ಯ ಅಸಾಧ್ಯಗಳ ನಡುವೆ’ ಕಾದಂಬರಿ ಈಗಿನ ಯುವಪೀಳಿಗೆಯ ಅದರಲ್ಲೂ ಯುವತಿಯರ ಸ್ಥಿತಿಯನ್ನು ಕಟ್ಟಿಕೊಡುತ್ತದೆ.

READ | ಮಧುಮೇಹಿಗಳೇ ಬ್ಲ್ಯಾಕ್ ಫಂಗಸ್‍ನಿಂದ ಎಚ್ಚರ, ಏನು ಲಕ್ಷಣ, ಪರಿಹಾರ?

‘ಸಾಧ್ಯ ಅಸಾಧ್ಯಗಳ ನಡುವೆ’ ಯಾವುದೂ ಅಸಾಧ್ಯವಿಲ್ಲ. ಆತ್ಮಸ್ಥೈರ್ಯವೊಂದಿದ್ದರೆ ಎಂತಹ ಸಾಧನೆಯನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ‌ ಕಾದಂಬರಿಯಲ್ಲಿನ ಪಾತ್ರಗಳೇ ಸಾಕ್ಷಿ.
ಆಧುನಿಕ ಜಗತ್ತಿನ ಸಂದಿಗ್ಧತೆ ನಡುವೆ ಸಂಬಂಧಗಳೆಷ್ಟು ಕ್ಲಿಷ್ಟವಾಗುತ್ತಿವೆ. ಯುವಪೀಳಿಗೆ ಹೇಗೆ ದಾರಿ ತಪ್ಪುತಿದ್ದಾರೆ ಎನ್ನುವುದನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದಾರೆ.
‘ಪಿಪ್ಲಿ ಲೈವ್’ ಹಿಂದಿ ಚಿತ್ರವೊಂದರಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಹಳ್ಳಿಯೊಂದರಲ್ಲಿ ಮೊಕ್ಕಾಂ ಹೂಡುತ್ತವೆ. ಆದರೆ, ಅದು ಹಳ್ಳಿಯೊಂದರ ಸಮಸ್ಯೆಯಾದರೆ, ಈ‌ ಕಾದಂಬರಿಯಲ್ಲಿ ಜಾಗತಿಕ ಮಟ್ಟದಲ್ಲಿ ತಮ್ಮ ಯಶೋಗಾಥೆಗಳ ಮೂಲಕ ಮಾಧ್ಯಮಗಳ ಗಮನ ಸೆಳೆದ ಎನ್.ಜಿ.ಒ ಹುಡುಕಾಟದಲ್ಲಿ ಪತ್ರಕರ್ತರು ಬರುತ್ತಾರೆ. ಲೇಖಕರು ಹೀಗೆ ಪಾತ್ರಗಳಿಗೆ ಜೀವ ತುಂಬುತ್ತಾ ಅವುಗಳ ಮೂಲಕವೇ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಸಂಪ್ರದಾಯಸ್ಥ ಕುಟುಂಬದ ಯುವತಿಯೊಬ್ಬಳು ಹೇಗೆ ದಾರಿ ತಪ್ಪುತ್ತಾಳೆ. ಸುತ್ತಲಿನ ವಾತಾವರಣ ಹೇಗೆ ಆಕೆಗೆ ದುಷ್ಚಟದ ದಾರಿ ತುಳಿಯಲು ಶೋಧಿಸುತ್ತದೆ ಎಂಬುವುದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಕಾದಂಬರಿಯಲ್ಲಿ ಬಹುಭಾಗ ಹೊಸಪೇಟೆ, ಕಲಬುರಗಿ, ಹಂಪಿ, ಬೆಂಗಳೂರಿಗೆ ಒತ್ತು ನೀಡಲಾಗಿದೆ. ಲೇಖಕರು ತಾವು ಕಂಡ ಅಂಶಗಳನ್ನೇ ಪಾತ್ರಗಳ ರೂಪದಲ್ಲಿ ನಿರೂಪಿಸಿರುವುದರಿಂದ ಕಾದಂಬರಿಯು ಓದುಗರಿಗೆ ಹತ್ತಿರವಾಗುತ್ತದೆ.
ಸಾಮಾಜಿಕ ಕಳಕಳಿ | ಕೆಟ್ಟ ಮಗ, ಮಗಳು ಮತ್ತು ತಂದೆಯನ್ನು ನೋಡಿದ್ದೇವೆ. ಆದರೆ ಕೆಟ್ಟ ತಾಯಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ, ಚಟದ ದಾಸತ್ವಕ್ಕೆ ಒಳಗಾದ ಯುವತಿಯರು ಮುಂದೊಂದು ದಿನ ತಾಯಿಯಾದಾಗ ಹೇಗೆ? ಎಂಬ ಸಾಮಾಜಿಕ ಕಾಳಜಿಯನ್ನು ಕಾದಂಬರಿಯಲ್ಲಿ ಕಾಣಬಹುದು.

READ | ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು

ಕಲಬುರಗಿಯ ಹಿರಿಯ ಸಾಹಿತಿ ಪ್ರೊ.ವಸಂತ್ ಕುಷ್ಟಗಿ ಅವರು ಬಿಡುಗಡೆಗೊಳಿಸಿರುವ ಕಾದಂಬರಿಯ ಬಗ್ಗೆ ಅವರು ಸಹ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದುಷ್ಚಟಗಳಿಗೆ ಗುರಿಯಾದ ಯುವತಿಯೇ ಎನ್‍ಜಿಒವೊಂದನ್ನು ಕಟ್ಟಿ ಅನುಭವ ಜನ್ಯ ಜ್ಞಾನದಿಂದ ಹಲವು ಚಟದ ದಾಸತ್ವಕ್ಕೆ ಒಳಗಾದವರಿಗೆ ಅದನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಾಳರ. ಹಲವು ರೋಚಕ ಘಟನೆಗಳೊಂದಿಗೆ ಸಾಗುವ ಕಾದಂಬರಿ ಇದಾಗಿದೆ.

ebook001 copyಕಾದಂಬರಿ ಪರಿಚಯ
ಕಾದಂಬರಿ ಹೆಸರು | ಸಾಧ್ಯ ಅಸಾಧ್ಯಗಳ ನಡುವೆ
ಲೇಖಕರು | ಪ್ರಮೋದ್ ಕರಣಂ (ಚೊಚ್ಚಲ ಕಾದಂಬರಿ)
ಪ್ರಕಾಶಕರು | ಶಾಶ್ವತ ಪಬ್ಲಿಕೇಶನ್
ಬೆಲೆ | 180 ರೂಪಾಯಿ (ಅಂಚೆ ವೆಚ್ಚ ಉಚಿತ)
ಕಾದಂಬರಿ ಬೇಕಿದ್ದರೆ ಹೀಗೆ ಮಾಡಿ | 9743224892ಗೆ ವಾಟ್ಸಾಪ್ ಮಾಡಿದರೆ ಸಾಕು ಮನೆ ತಲುಪಲಿದೆ ಪುಸ್ತಕ.

error: Content is protected !!