ವಾರ್ ರೂಂನಲ್ಲಿ ಜನರ ಅಹವಾಲು ಆಲಿಸಿದ ಸಿಎಂ ಯಡಿಯೂರಪ್ಪ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೊಮ್ಮಲೂರಿನಲ್ಲಿರುವ ಬಿಬಿಎಂಪಿ ವಾರ್ ರೂಂಗೆ ಸೋಮವಾರ ಭೇಟಿ ನೀಡಿದರು.

https://www.suddikanaja.com/2021/05/24/competition-between-gps-to-control-covid/

ಕೋವಿಡ್ ನಿರ್ವಹಣೆ ನಿಟ್ಟಿನಲ್ಲಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರು ಖುದ್ದು ವಾರ್ ರೂಂಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಸ್ವೀಕರಿಸಿದರು.

ಸಾರ್ವಜನಿಕರು ತಮ್ಮ ತೊಂದರೆಗಳನ್ನು ಹೇಳಿಕೊಳ್ಳುವುದಕ್ಕಾಗಿ ವಾರ್ ರೂಂಗೆ ಕರೆ ಮಾಡಿದಾಗ ಅವುಗಳನ್ನು ಸ್ವೀಕರಿಸಿ ಅತ್ಯಂತ ಸಮಾಧಾನದಿಂದ ಸಮಸ್ಯೆಗಳನ್ನು ಆಲಿಸಿದರು. ಆಕ್ಸಿಜನ್, ಬೆಡ್ ಸಂಬಂಧಪಟ್ಟಂತೆ ಬಂದ ದೂರುಗಳನ್ನು ಆಲಿಸಿದರು. ಪರಿಹಾರ ನೀಡುವುದಾಗಿ ಭರವಸೆ ನೀಡಿದ ಅವರು, ಅಧಿಕಾರಿಗಳಿಗೆ ಸೂಚನೆ ನೀಡಿದರು.

https://www.suddikanaja.com/2020/11/10/tweet-traffic/

error: Content is protected !!