ಒಂದೇ ದಿನ ಬಿತ್ತು ₹ 92 ಸಾವಿರ ದಂಡ, ಅಂಗಡಿಯವರ ಮೇಲೂ ಕೇಸ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಪೊಲೀಸರು ಶನಿವಾರ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದ್ದಾರೆ.

READ | ಆರು ಜನರ ಬಲಿ ಪಡೆದ ಕೊರೊನಾ, ಮುಂದುವರಿದ ಅಟ್ಟಹಾಸ, ತಾಲೂಕುವಾರು ಮಾಹಿತಿ ಇಲ್ಲಿದೆ

ಅಂಗಡಿಯ ಮಾಲೀಕರ ವಿರುದ್ಧ ಕರ್ನಾಟಕ ಎಪಿಡೆಮಿಕ್‌ ಡಿಸೆಸ್ಟರ್ ಕಾಯ್ದೆ ಅಡಿಯಲ್ಲಿ ದೊಡ್ಡಪೇಟೆ ಠಾಣೆಯಲ್ಲಿ 1 ಮತ್ತು ವಿನೋಬನಗರ ಠಾಣೆಯಲ್ಲಿ 1 ಪ್ರಕರಣ ಸೇರಿ ಒಟ್ಟು 2 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ ಒಟ್ಟು 153 ವಾಹನಗಳನ್ನು (147 ದ್ವಿ ಚಕ್ರ ವಾಹನಗಳನ್ನು, ಮತ್ತು 6 ಕಾರು) ವಶಪಡಿಸಿಕೊಳ್ಳಲಾಗಿದೆ. ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು 180 ಪ್ರಕರಣಗಳನ್ನು ದಾಖಲಿಸಿ 92,100 ರೂಪಾಯಿ ದಂಡ ವಿಧಿಸಲಾಗಿದೆ.

error: Content is protected !!