ಮಲೆನಾಡಲ್ಲಿ ತಂಪೆರಚಿದ ಮಳೆರಾಯ, ಎಲ್ಲಿ, ಎಷ್ಟು ಎಂಎಂ ಮಳೆಯಾಗಿದೆ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನ‌ ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ. ಕಳೆದ 24 ಗಂಟೆಯಲ್ಲಿ ಮಲೆನಾಡಿನಲ್ಲಿ 7.5 ಎಂ.ಎಂ. ಮಳೆಯಾಗಿರುವುದು ವರದಿಯಾಗಿದೆ.

READ | ಶಿವಮೊಗ್ಗದಲ್ಲಿ ದಾಖಲಾಯ್ತು ಕನಿಷ್ಠ ತಾಪಮಾನ, ಸಂಜೆಯಿಂದ ದಿಢೀರ್ ಮಳೆ

ಭಾನುವಾರ ಶಿವಮೊಗ್ಗ ನಗರ, ಸಾಗರ, ಸೊರಬ ಭಾಗದಲ್ಲಿ‌ ಭಾರಿ ಮಳೆಯಾಗಿದೆ. ಸಂಜೆಯಿಂದ ಗುಡುಗು, ಮಿಂಚು ಸಹಿತ ಮಳೆರಾಯ ತನ್ನ ಆರ್ಭಟ ಹೊರ ಹಾಕಿದ್ದಾ‌ನೆ. ಹಳವೆಡೆ ಮರ, ಗಿಡಗಳು ಧರೆಗೆ ಕುಸಿದಿವೆ.
ಶಿವಮೊಗ್ಗದಲ್ಲಿ ಕಳೆದ 24 ಗಂಟೆಯಲ್ಲಿ ವಾಡಿಕೆಗಿಂತ ಅಧಿಕ 9.9 ಎಂಎಂನಷ್ಟು ಮಳೆ ದಾಖಲಾಗಿದೆ.

error: Content is protected !!