ಕೋವಿಡ್‍ನಿಂದ ಮೃತಪಟ್ಟವರ ಡೆಡ್‍ಬಾಡಿ ನೀಡಲು ನಿರಾಕರಿಸಿದ್ದಲ್ಲಿ ಆಸ್ಪತ್ರೆ ನೋಂದಣಿ ರದ್ದು

 

 

ಸುದ್ದಿ ಕಣಜ.ಕಾಂ
Covid orderಬೆಂಗಳೂರು: ಕೋವಿಡ್‍ನಿಂದ ಮೃತಪಟ್ಟವರ ಶವವನ್ನು ಸಂಬಂಧಿಕರಿಗೆ ನೀಡಲು ಬಿಲ್‍ಗೋಸ್ಕರ ಖಾಸಗಿ ಆಸ್ಪತ್ರೆಯವರು ನಿರಾಕರಿಸಿದ್ದಲ್ಲಿ ಅಂತಹ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಆದೇಶಿಸಿದ್ದಾರೆ.

READ | ವಾರ್ ರೂಂನಲ್ಲಿ ಜನರ ಅಹವಾಲು ಆಲಿಸಿದ ಸಿಎಂ ಯಡಿಯೂರಪ್ಪ

ಕೊರೊನಾದಿಂದ ಮೃತಪಟ್ಟವರ ಚಿಕಿತ್ಸೆ ಲಕ್ಷಾಂತರ ಬಿಲ್ ಮಾಡಲಾಗುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೇ ವ್ಯಕ್ತಿ ಮೃತಪಟ್ಟಲ್ಲಿ ಅಂತಹವರ ಶವ ನೀಡುವುದಕ್ಕೆ ಕಡ್ಡಾಯವಾಗಿ ಬಾಕಿ ಇರುವ ಶುಲ್ಕ ಪಾವತಿಸುವಂತೆ ಆಸ್ಪತ್ರೆಯವರು ನಿರ್ದೇಶಿಸುತ್ತಿದ್ದಾರೆ. ಹಲವೆಡೆ ದುಡ್ಡು ನೀಡದ್ದಕ್ಕೆ ಶವ ನೀಡದ ಘಟನೆಗಳು ಬೆಳಕಿಗೆ ಬಂದಿವೆ. ಅದನ್ನು ಮನಗಂಡು ಇಲಾಖೆ ನಿರ್ದೇಶನ ನೀಡಿದೆ.
ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ (ಕೆಪಿಎಂಇ) 2007 ಭಾರ 11(1) ಉಪ ಷರತ್ತು (4) ಅನ್ವಯ ಮೃತ ವ್ಯಕ್ತಿ ಶವ ಹಸ್ತಾಂತರ ವೇಳೆ ಬಾಕಿ ಬಿಲ್ ಪಾವತಿಗೆ ಒತ್ತಾಯ ಹೇರುವಂತಿಲ್ಲ. ಬಿಲ್ ಪಾವತಿಸದಿದ್ದರೆ ಶವ ಹಸ್ತಾಂತರ ಮಾಡಲು ನಿರಾಕರಣೆ ಮಾಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ. ಅದರನ್ವಯ ಆದೇಶಿಸಲಾಗಿದೆ.

https://www.suddikanaja.com/2021/05/18/ambulance-will-seize-if-they-charge-heavy-amount-to-transport-died-body/

 

error: Content is protected !!