ರಸಗೊಬ್ಬರ ಯಾವ ದರಕ್ಕೆ ಮಾರಾಟ ಮಾಡಬೇಕು, ವಹಿಸಬೇಕಾದ ಎಚ್ಚರಿಕೆಗಳೇನು, ರಸಗೊಬ್ಬರ ಖರೀದಿಸುವ ಮುನ್ನ ಇದನ್ನು ಓದಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದಲ್ಲಿ ನಮೂದಿಸಿರುವ ಹಳೇ ದರದಲ್ಲಿಯೇ ರೈತರಿಗೆ ಮಾರಾಟ ಮಾಡುವಂತೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಶಿವರಾಜ್ ಕುಮಾರ್ ತಿಳಿಸಿದ್ದಾರೆ.

READ |ಸಾವಿರ ಗಡಿ ದಾಟಿದ ಕೊರೊ‌ನಾ ಸೋಂಕು, ಶಿವಮೊಗ್ಗ ಟ್ರಿಪಲ್, ಭದ್ರಾವತಿಯಲ್ಲಿ ಡಬಲ್ ಸೆಂಚ್ಯೂರಿ, ಬೇರೆ ತಾಲೂಕಿನಲ್ಲಿ ವರದಿ ಇಲ್ಲಿದೆ

ರೈತರು ರಸಗೊಬ್ಬರ ಕೊಳ್ಳುವಾಗ ಕಡ್ಡಾಯವಾಗಿ ಚೀಲದ ಮೇಲೆ ನಮೂದಿಸಿರುವ ದರಕ್ಕೆ ಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೆಲವೆಡೆ ಮಾರಾಟಗಾರರು ದರಗಳನ್ನು ಪರಿಷ್ಕರಿಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜಾಗರೂಕತೆ ವಹಿಸಬೇಕು. ಖರೀದಿಸಿ ಬಿಲ್ ಪಡೆಯಬೇಕು ಎಂದು ಹೇಳಿದ್ದಾರೆ.
ಪಿಒಎಸ್ ಯಂತ್ರದಲ್ಲಿಯೇ ಮಾರಾಟ ಕಡ್ಡಾಯ | ತಾಲೂಕಿನಲ್ಲಿರುವ ಮಾರಾಟಗಾರರು ರಸಗೊಬ್ಬರದ ಮಾರಾಟವನ್ನು ಕಡ್ಡಾಯವಾಗಿ ಪಿಒಎಸ್ ಯಂತ್ರದಲ್ಲಿಯೇ ಮಾರಾಟ ಮಾಡಬೇಕು. ರೈತರಿಗೆ ಕಡ್ಡಾಯವಾಗಿ ಬಿಲ್ ವಿತರಿಸಬೇಕು. ರಸಗೊಬ್ಬರ ಮಾರಾಟ ಮಳಿಗೆ ಮುಂಭಾಗದಲ್ಲಿ ಸಂಸ್ಥೆವಾರು ದಾಸ್ತಾನಿರುವ ರಸಗೊಬ್ಬರದ ಪ್ರಮಾಣ ಹಾಗೂ ದರವನ್ನು ರೈತರಿಗೆ ಸುಲಭವಾಗಿ ಕಾಣಿಸುವಂತೆ, ಅರ್ಥವಾಗುವ ರೀತಿ ಪ್ರದರ್ಶಿಸಬೇಕು.
ಹಳೇ ದರದಲ್ಲಿ ಸ್ವೀಕೃತವಾಗಿರುವ ಮತ್ತು ಸ್ವೀಕೃತವಾಗುವ ರಸಗೊಬ್ಬರಗಳನ್ನು ಹೊಸ ದರದಲ್ಲಿ ಮಾರಾಟ ಮಾಡಿದ್ದು ಕಂಡುಬಂದರೆ ರಸಗೊಬ್ಬರ ನಿಯಂತ್ರಣ ಆದೇಶದ 1985 ಅಡಿ ಮಾರಾಟ ಪರವಾನಗಿಯನ್ನು ನೋಟಿಸ್ ನೀಡದೇ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

https://www.suddikanaja.com/2020/11/17/digital-payment-at-fertilizer-retail-store/

error: Content is protected !!