ಶಿವಮೊಗ್ಗ ಲಾಕ್ ಡೌನ್ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಲಾಕ್ ಡೌನ್ ಬಗ್ಗೆ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
‘ಕೊರೊನಾ ಸೋಂಕಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಜೂನ್ 7ರ ವರೆಗೆ ಲಾಕ್ ಡೌನ್ ವಿಧಿಸಲಾಗಿದೆ. ಈ ವೇಳೆಯಲ್ಲಿ ಸೋಂಕು ಇಳಿಮುಖ ಆಗುವುದರ ಮೇಲೆ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಿರ್ಧರಿಸಲಾಗುವುದು.
ಒಂದು ವೇಳೆ, ಸೋಂಕು ಇಳಿಮುಖವಾದರೆ ಲಾಕ್ ಡೌನ್ ಅವಧಿಯೂ ಕಡಿಮೆ ಆಗಲಿದೆ. ಹೀಗೆಯೇ ಮುಂದುವರಿದರೆ ಲಾಕ್ ಡೌನ್ ಅವಧಿಯೂ ವಸ್ತರಣೆ ಆಗಲಿದೆ. ಹೀಗಾಗಿ, ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

error: Content is protected !!