ನೌಕರನಿಗೆ ಪಾಸಿಟಿವ್ ಬಂದರೂ ನಿರ್ಲಕ್ಷ್ಯ ವಹಿಸಿದ್ದ ಅಂಗಡಿ ಮಾಲೀಕ, ಕಟ್ಟುನಿಟ್ಟಿನ ಕ್ರಮಕ್ಕೆ ಮೇಯರ್ ಸೂಚನೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಾಲ್ ರಾಜ್ ಅರಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಕಂಪೆನಿಯೊಂದರ ರೆಸ್ಟೋರೆಂಟ್ ವೊಂದರ ಮೇಲೆ ಮೇಯರ್ ಸುನೀತಾ ಅಣ್ಣಪ್ಪ ನೇತೃತ್ವದ ತಂಡ ದಾಳಿ ನಡೆಸಿ, ಖಡಕ್ ವಾರ್ನಿಂಗ್ ನೀಡಿದೆ.

READ | ಮರಕ್ಕೆ ಅಪ್ಪಳಿಸಿದ ಟ್ಯಾಂಕರ್, ಪಾದಾಚಾರಿ ಸ್ಥಳದಲ್ಲೇ ಸಾವು

ಇತ್ತೀಚೆಗೆ ಈ ರೆಸ್ಟೋರೆಂಟ್ ನಲ್ಲಿ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ಎಂಟು ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದು, ಗಂಟಲು ದ್ರವದ ಪರೀಕ್ಷೆ ಸಹ ಮಾಡಿಸಿಲ್ಲ.
ಒಂದುವೇಳೆ, ಅವರಲ್ಲೂ ಸೋಂಕು ಇದ್ದಲ್ಲಿ ರೆಸ್ಟೋರೆಂಟ್ ಗೆ ಆಹಾರ ಸೇವಿಸಲು ಬರುವವರಿಗೂ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ, ಕೂಡಲೇ ರೆಸ್ಟೋರೆಂಟ್ ನಲ್ಲಿರುವ ಎಲ್ಲರ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸಬೇಕು. ಹಾಗೂ ನಿರ್ಲಕ್ಷ್ಯ ವಹಿಸಿದ್ದಕ್ಕೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಮೇಯರ್ ಸುನೀತಾ ಅಣ್ಣಪ್ಪ ಸೂಚನೆ ನೀಡಿದ್ದಾರೆ.

error: Content is protected !!