BREAKING NEWS | ಜಿಲ್ಲಾಡಳಿತ ಶಾಕ್, ಇಂದಿನಿಂದ ಫಸ್ಟ್ ಡೋಸ್ ಕೊರೊನಾ‌ ಲಸಿಕೆ ಸ್ಥಗಿತ, ಕಾರಣವೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಪಡೆಯುವುದಕ್ಕೆ ಜನ ಕೇಂದ್ರಗಳಿಗೆ ದಾಂಗುಡಿ ಇಡುತ್ತಿರುವಾಗಲೇ ಜಿಲ್ಲಾಡಳಿತ‌ ಶಾಕ್ ನೀಡಿದೆ.

READ | ಹೋಮ್‌ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಯ ಬಲಿ‌ ಪಡೆದ ಕೊರೊನಾ, ಪಾಸಿಟಿವ್ ಬಂದ ಮಾರನೇ ದಿನವೇ ಸಾವು!

ಇದುವರೆಗೆ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆಗಳನ್ನು ನೀಡಲಾಗುತಿತ್ತು.‌ ಆದರೆ, ಮೇ 5ರಿಂದ ಈ ವಯೋಮಿತಿಯವರಿಗೂ ಲಸಿಕೆ ಲಭ್ಯವಾಗುವುದು ಅನುಮಾನ. ಕಾರಣ, ಎರಡನೇ ಡೋಸ್ ಮಾತ್ರ ನೀಡುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.
ಕಾರಣವೇನು | ಜಿಲ್ಲೆಯಲ್ಲಿ ಲಸಿಕೆಯ ಅಭಾವವಿದ್ದು, ಎರಡನೇ ಡೋಸ್ ಪಡೆಯಬೇಕಾದವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಮೊದಲನೇ‌ ಡೋಸ್ ಗೆ ಬ್ರೇಕ್ ಹಾಕಲಾಗಿದೆ.

READ | ಭಾರಿ ಬಿರುಗಾಳಿ, ಮಳೆಯಿಂದ ಧರೆಗೆ ಕುಸಿದ ತೆಂಗಿನ ಮರಗಳು

ಮೂಲದ ಪ್ರಕಾರ, ಇಂದಿನಿಂದ ಲಭ್ಯ ಲಸಿಕೆಗಳಲ್ಲಿ ಶೇ.70ರಷ್ಟು ಎರಡನೇ ಡೋಸ್ ಹಾಗೂ ಶೇ.30ರಷ್ಟು ಮೊದಲನೇ ಡೋಸ್ ಗೆ ಬಳಸುವಂತೆ ನಿರ್ದೇಶಿಸಲಾಗಿದೆ. ಮಂಗಳವಾರ ಸಂಜೆ ಈ‌ ಸಂಬಂಧ ನಡೆದ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.

error: Content is protected !!